ಜಯಲಲಿತಾ ಪ್ರಧಾನಿಯಾದರೆ ದೇಶಕ್ಕೆ ಅಮ್ಮ ಆಗುತ್ತಾರೆ: ದೇವೇಗೌಡ

ಸೋಮವಾರ, 10 ಫೆಬ್ರವರಿ 2014 (12:58 IST)
PR
ಜಯಲಲಿತಾ ಅವರನ್ನು ತಮಿಳುನಾಡಿನ ಜನ ಅಮ್ಮ ಎಂದು ಕರೆಯುತ್ತಿದ್ದಾರೆ. ಅವರು ಪ್ರಧಾನಿಯಾದರೆ ಇಡೀ ದೇಶಕ್ಕೆ ಅಮ್ಮ ಆಗುತ್ತಾರೆ. ಅವರ ಬಳಿ ನಮ್ಮ ಮಕ್ಕಳಿಗೆ (ಕರ್ನಾಟಕ) ನೀರು ಕೊಡಿ ಕೇಳಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬಂದಲ್ಲಿ ಯಾರೂ ಬೇಕಾದರೂ ಪ್ರಧಾನಮಂತ್ರಿಯಾಗಬಹುದು ಎಂದು

ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ತೃತೀಯ ರಂಗದ ಮುಲಾಯಂ ಸಿಂಗ್, ನಿತೀಶ್‌ಕುಮಾರ್, ಜಯಲಲಿತಾ ಹೀಗೆ ಯಾರು ಬೇಕಾದರೂ ಪ್ರಧಾನಿ ಆಗಬಹುದು ಎಂದರು.

ಒಟ್ಟಾರೆ ಅಮ್ಮನ ಸ್ಥಾನದಲ್ಲಿರುವ ಜಯಲಲಿತಾ ಅವರು ನೀರು ಕೊಟ್ಟೇ ಕೊಡುತ್ತಾರೆ. ಕಾವೇರಿ ಸಮಸ್ಯೆ ಪರಿಹರಿಸಬಹುದು. ಹೀಗಾಗಿ ಜಯಲಲಿತಾ ಅವರು ಪ್ರಧಾನಿಯಾದರೇ ನಮ್ಮದೇನು ಅಭ್ಯಂತರವಿಲ್ಲ ಎಂದರು.

ಜೆಡಿಎಸ್‌ಉಳಿಯಬೇಕು: ಜೆಡಿಎಸ್ ಪಕ್ಷ ಉಳಿಯಬೇಕು, ಇನ್ನಷ್ಟು ಬೆಳೆಯಬೇಕು. ನನಗೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಬೇಕೆಂಬ ಚಪಲ ಇಲ್ಲ. ಪುತ್ರ ವಾತ್ಯಲ್ಯವೂ ಇಲ್ಲ. ಜೆಡಿಎಸ್ ವಂಶಪಾರಂಪರ್ಯ ಪಕ್ಷವಲ್ಲ. ದೇಶದಲ್ಲಿ ಯಾವುದೇ ಪ್ರಾದೇಶಿಕ ಪಕ್ಷ ಮಾಡದಿರುವ ಕೆಲಸವನ್ನು ಜೆಡಿಎಸ್ ಮಾಡಿದೆ.

ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮೆರೆಯುತ್ತಿರುವ ನಾಯಕರಿಗೆ ಗೊತ್ತಾಗಬೇಕು ಎಂದು ಅವರು ಹೇಳಿದರು. 50 ವರ್ಷಗಳ ರಾಜಕಾರಣದಲ್ಲಿ, ಜೀವನದಲ್ಲಿ ತುಂಬಾ ನೊಂದಿದ್ದೇನೆ, ಎಂದೂ ಸಹ ಸುಖ ಕಂಡಿಲ್ಲ ಎಂದು ದೇವೇಗೌಡ ತಮ್ಮ ಕುಟುಂಬ ಸದಸ್ಯರ ನೆನಪಿಸಿಕೊಂಡು ಭಾವುಕರಾದರು.

ವೆಬ್ದುನಿಯಾವನ್ನು ಓದಿ