ಡಾ.ವಿಷ್ಣು ಸಮಾಧಿಗೆ ವಾಸ್ತು ದೋಷ : ಸ್ಥಳಾಂತರಕ್ಕೆ ಚಿಂತನೆ.

ಶನಿವಾರ, 7 ಸೆಪ್ಟಂಬರ್ 2013 (10:35 IST)
PR
PR
ದಿವಂಗತ ಡಾ. ವಿಷ್ಣುವರ್ಧನ್‌ ಅವರ ಸಮಾಧಿಯನ್ನು ಸ್ಥಳಾಂತರಿಸಲು ಭಾರತಿ ವಿಷ್ಣುವರ್ಧನ್‌ ಚಿಂತಿಸುತ್ತಿದ್ದಾರೆ. ವಿಷ್ಣು ಸಮಾಧಿ ಇರುವ ಜಾಗವು ವಾಸ್ತು ದೋಷದಿಂದ ಕೂಡಿದೆ ಎಂಬ ಕಾರಣಕ್ಕೆ ಸಮಾಧಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಕನ್ನಡದ ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಅವರು 2009 ರ ಡಿಸೆಂಬರ್‌ 30 ರಂದು ಇಹಲೋಕ ತ್ಯಜಿಸಿದರು. ವಿಷ್ಣು ಅವರನ್ನು ಹಾಸ್ಯನಟ ಬಾಲಣ್ಣನವರ ಕನಸಿನ ಕೂಸಾದ ಅಭಿಮಾನ್‌ ಸ್ಟುಡಿಯೋದಲ್ಲಿ ಸಮಾಧಿ ಮಾಡಲಾಯಿತು. ಇದಕ್ಕಾಗಿ ಸರ್ಕಾರ 2 ಎಕರೆ ಜಮೀನನ್ನು ನೀಡಿತ್ತು. ಆದ್ರೆ ಡಾ. ವಿಷ್ಣು ಇಹಲೋಕ ತ್ಯಜಿಸಿ 4 ವರ್ಷಗಳು ಕಳೆದರೂ, ವಿಷ್ಣು ಸ್ಮಾರಕ ನಿರ್ಮಾಣ ಇದುವರೆಗೂ ಸಾಧ್ಯವಾಗಿಲ್ಲ. ಇದೆಲ್ಲದಕ್ಕೂ ಕಾರಣ ವಿಷ್ಣು ಸಮಾಧಿ ಇರುವ ಜಾಗದಲ್ಲಿ ವಾಸ್ತು ದೋಷ ಇದೆ ಎಂದು ವಾಸ್ತು ತಜ್ಞರು ಹೇಳಿದ್ದಾರೆ.

ಸಮಾಧಿಯಲ್ಲಿ ಏನಿದೆ ಅಂತಹ ವಾಸ್ತು ದೋಷ? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ...

PR
PR
ವಿಷ್ಣು ಸಮಾಧಿ ಇರುವ ಸ್ಥಳದಲ್ಲಿ ನೈರುತ್ಯ ಭಾಗಕ್ಕೆ ಹಳ್ಳ ಇದೆ. ಹೀಗಾಗಿ ಹಳ್ಳ ಇರುವ ಕಾರಣಕ್ಕೆ ಹೆಚ್ಚು ಅಡೆತಡೆಗಳು ಉಂಟಾಗುತ್ತವೆ. ಇನ್ನೊಂದು ವಾಸ್ತು ದೋಷ ಎಂದರೆ, ಉತ್ತರದ ಭಾಗ ಹೆಚ್ಚು ಎತ್ತರದಲ್ಲಿದೆ. ಇದು ಡಾ.ವಿಷ್ಣುವರ್ಧನ್‌ ಅವರ ಸಮಾಧಿಯ ಅಭಿವೃದ್ದಿಗೆ ಕಂಟಕವಾಗಿ ಮಾರ್ಪಟ್ಟಿದೆ.

ಹೀಗಾಗಿ ವಿಷ್ಣು ಸ್ಮಾರಕ ಮಾಡಲು ಉದ್ದೇಶಿಸಿದ್ದರೂ, ನಾಲ್ಕು ವರ್ಷಗಳಿಂದ ಅದು ಕೈಗೂಡದಿರುವುದಕ್ಕೆ ಈ ವಾಸ್ತುದೋಷವೇ ಕಾರಣ. ಅಷ್ಟೇ ಅಲ್ಲ, ಅಭಿಮಾನ್‌ ಸ್ಟೂಡಿಯೋ ಜಾಗದ ವಿವಾದ ಸದ್ಯಕ್ಕೆ ನ್ಯಾಯಾಲಯದಲ್ಲಿದೆ. ಆ ವಿವಾದ ಇನ್ನು ಬಗೆಹರಿದಿಲ್ಲ. ಈ ಎಲ್ಲಾ ಕಂಟಕಗಳಿಗೂ ಸ್ಥಳದ ದೋಷವೇ ಪ್ರಮುಖ ಕಾರಣ ಎಂಬುದನ್ನು ವಾಸ್ತು ತಜ್ಞ ಆದಿತ್ಯ ನಾರಾಯಣ ಗುರುಜಿ ಹೇಳಿದ್ದಾರೆ.

ಖ್ಯಾತ ಸಂಖ್ಯಾಶಾಸ್ತ್ರಜ್ಞ ಆದಿತ್ಯ ನಾರಾಯಣ ಅವರ ಸಲಹೆಯೆ ಮೇರೆಗೆ ಸಮಾಧಿ ಸ್ಥಳಾಂತರಿಸಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ