ತೀವೃ ಅಸ್ವಸ್ಥರಾಗಿರುವ ಹಿರಿಯ ನಟ ಸಿ. ಆರ್. ಸಿಂಹ.

ಗುರುವಾರ, 27 ಫೆಬ್ರವರಿ 2014 (15:05 IST)
PR
ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ನಟ, ನಿರ್ದೇಶಕ, ಪ್ರಖ್ಯಾತ ರಂಗಕರ್ಮಿ ಸಿ. ಆರ್. ಸಿಂಹ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಬನಶಂಕರಿಯ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಳೆ ಕಾನ್ಸರನಿಂದ ಬಳಲುತ್ತಿರುವ 72 ವರ್ಷದ ಸಿಂಹ ಕಳೆದ ಒಂದು ವಾರದಿಂದ ನಗರದ ಖಾಸಗಿ ದವಾಖಾನೆಯಲ್ಲಿ ದಾಖಲಾಗಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಿಂಹ ಅವರ ಸಹೋದರ ನಟ ಶ್ರೀನಾಥ ತಮ್ಮ ಅಣ್ಣನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿರುವ ಸಚಿವ ರೋಷನ್ ಬೇಗ್, ಅವರ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸುತ್ತದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ