ತೃಪ್ತಿ ತಾರದ ಆಟೋ ದರ ಪರಿಷ್ಕರಣೆ

ಗುರುವಾರ, 31 ಜನವರಿ 2008 (18:43 IST)
ಆಟೋದರವನ್ನು ಹೆಚ್ಚಿಸುವ ಕುರಿತು ಜಿಲ್ಲಾಧಿಕಾರಿಗಳು ಈಗಾಗಲೇ ಹೇಳಿಕೆ ನೀಡಿದ್ದರೂ, ಆಟೋ ಚಾಲಕರ ಸಮಸ್ಯೆ ಮಾತ್ರ ಬಗೆಹರಿದಿಲ್ಲ.ಆಟೋ ಮಾಲಿಕರ ಜೊತೆಯಲ್ಲಿ ನಡೆದಿರುವ ಸಭೆಯಲ್ಲಿ ಫೆಬ್ರವರಿ 1ರಿಂದ ಕನಿಷ್ಠದರ 12ರಿಂದ 14ರೂ. ಹಾಗೂ ಪ್ರತಿ ಕಿ.ಮೀ.ದರ 6ರಿಂದ 7ರೂ. ವರೆಗೆ ಹೆಚ್ಚಿಸಲಾಗಿತ್ತು.

ಆದರೆ ಈ ನಿರ್ಣಯವನ್ನು ಕೆಲವು ಸಂಘಟನೆಗಳು ಒಪ್ಪದೆ ತೀವ್ರವಾಗಿ ವಿರೋಧಿಸಿವೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಐಟಿಯು ಬೆಂಬಲಿತ ಆಟೋ ಚಾಲಕರ ಸಂಘ ಇಂದು (ಗುರುವಾರ) ಬನ್ನಪ್ಪ ಪಾರ್ಕಿನಲ್ಲಿ ಮುಷ್ಕರ ನಡೆಸಿತು.

ಆಟೋ ಪ್ರಯಾಣ ಕನಿಷ್ಠದರ 14ರೂ.ನ ಬದಲು 15ರೂ.ಗೆ ಹೆಚ್ಚಿಸಬೇಕು. ಅಲ್ಲದೆ ಪ್ರತಿ ಕಿ.ಮೀ. ದರವನ್ನು 7ರೂ.ನಿಂದ 8ರೂ.ಗೆ ಹೆಚ್ಚಿಸಬೇಕೆಂಬುದು ಆಟೋ ಚಾಲಕರ ಆಗ್ರಹವಾಗಿದ್ದು, ಈ ಕೂಡಲೇ ಆಟೋ ದರವನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ, ಪ್ರಯಾಣಿಕರಿಗೂ ಚಿಲ್ಲರೆ ಕೊಡುವುದು ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠದರವನ್ನು 15ರೂ.ಗೆ ಏರಿಸಬೇಕೆಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ