ತೆಲಂಗಾಣಕ್ಕೆ ಜೈ ಎಂದಿದ್ದಕ್ಕೆ ಎಂಬಿಬಿಎಸ್‌ ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ರಾಯಲಸೀಮಾ ವಿದ್ಯಾರ್ಥಿಗಳು.

ಗುರುವಾರ, 14 ನವೆಂಬರ್ 2013 (13:55 IST)
PR
PR
ನೆನ್ನೆ ಶ್ರೀ ದೇವರಾಜ್‌ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ದ್ವಿತೀಯ ವರ್ಷದ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದರು. ಇದಕ್ಕೆ ಕಾರಣ ತೆಲಂಗಾಣ ಮತ್ತು ಸೀಮಾಂಧ್ರದ ಗಲಾಟೆ ಎಂದು ತಿಳಿದು ಬಂದಿದೆ. ತೆಲಂಗಾಣ ಮೂಲದ ವಿದ್ಯಾರ್ಥಿಯನ್ನು ಸೀಮಾಂಧ್ರ ಮೂಲದ ವಿದ್ಯಾರ್ಥಿಗಳು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದರು. ಇದರಿಂದಾಗಿ ತೆಲಂಗಾಣ ಮೂಲದ ವಿದ್ಯಾರ್ಥಿಯ ದೇಹ 51 ರಷ್ಟು ಬೆಂಕಿಯಲ್ಲಿ ಬೆಂದು ಹೋಗಿದೆ.

ಮೂಲತಃ ಮೆಹಬೂಬ್‌ ನಗರದ ಕಲವಕುಟಿ ಪ್ರದೇಶದ ನಿವಾಸಿಯಾಗಿರುವ ಕಾಮೇಶ್‌ ಅಲಿಯಾಸ್‌ ಸಾಯಿ ಪ್ರಕಾಶ್‌ ಎಂಬ ವಿದ್ಯಾರ್ಥಿಯು ತೆಲಂಗಾಣ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದ. ಇದರಿಂದ ಸಿಟ್ಟಿಗೆದ್ದ ರಾಯಲ ಸೀಮಾ ವಿದ್ಯಾರ್ಥಿಗಳು ಕಾಮೇಶ್‌ನ ಜೊತೆಗೆ ಜಗಳಕ್ಕೆ ಇಳಿದಿದ್ದಾರೆ. ಇದಾದ ನಂತರ ಕಾಲೇಜಿನ ಹೊರಗೆ ಬಂದ ಕಾಮೇಶ್‌ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಅನಾಮಿಕ ವ್ಯಕ್ತಿಗಳು ಬೈಕಿನಲ್ಲಿ ಬಂದು ಆತನ ಬಳಿ ಇದ್ದ ಚಿನ್ನದ ಸರವನ್ನು ಕಿತ್ತುಕೊಂಡು ಕಾಮೇಶ್‌ ಮೇಲೆ ಡೀಸೆಲ್‌ ಸುರಿದು ಬೆಂಕಿ ಹಚ್ಚಿದ್ದಾರೆ.

ಸಾಯುವಾಗಲೂ "ಜೈ ತೆಲಂಗಾಣ" ಎಂದು ಕೂಗಿದ್ದ... ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ.....

ಕಾಮೇಶ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿನ ಕಿಂಗ್‌ ಜಾರ್ಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಮೇಶನ ದೇಹ ಶೇ 51 ರಷ್ಟು ಸುಟ್ಟು ಹೋಗಿದ್ದು, ಇದರಿಂದ ಕಿಡ್ನಿಗಳು ವಿಫಲಾವಿದೆ ಎಂದು ವೈದ್ಯರು ತಿಳಿಸಿದ್ದಾರೆ.

PTI
PTI
ಬೈಕಿನಲ್ಲಿ ಬಂದು ಕಾಮೇಶ್‌ ಮೇಲೆ ಡೀಸೆಲ್‌ ಸುರಿದು ಬೆಂಕಿ ಹಚ್ಚಿದ ಕೃತ್ಯ ರಾಯಲಸೀಮಾ ವಿದ್ಯಾರ್ಥಿಗಳದ್ದೇ ಎಂದು ಹೇಳಲಾಗುತ್ತಿದೆ. ತೆಲಂಗಾಣ ಪ್ರಾಂತ್ಯದ ವಿದ್ಯಾರ್ಥಿ ಸಾವಿನ ದವಡೆಯಲ್ಲಿ ಇದ್ದರೂ, ಕಾಮೇಶ್ "ಜೈ ತೆಲಂಗಾಣ" ಎಂದು ಕೂಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾಮೇಶ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿನ ಕಿಂಗ್‌ ಜಾರ್ಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಮೇಶನ ದೇಹ ಶೇ 51 ರಷ್ಟು ಸುಟ್ಟು ಹೋಗಿದ್ದು, ಇದರಿಂದ ಕಿಡ್ನಿಗಳು ವಿಫಲಾವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ