ದಾಳಿ ನಡೆಸಿದ ತಕ್ಷಣ ಅಚ್ಚರಿಗೊಂಡ ಲೋಕಾಯುಕ್ತರು.

ಗುರುವಾರ, 31 ಅಕ್ಟೋಬರ್ 2013 (10:42 IST)
PR
PR
ನೆನ್ನೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಕಬಳಿಸಿದ ಬಗ್ಗೆ ಸ್ಪಷ್ಟ ದಾಖಲೆಗಳು ದೊರೆತಿದೆ. ದಾವಣಗೆರೆ, ಮೈಸೂರು, ಗುಲ್ಬರ್ಗ ಮತು ಹುಬ್ಬಳ್ಳಿ ನಗರಗಳಲ್ಲಿ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ ಭ್ರಷ್ಟರಿಂದ ಒಟ್ಟು ಸುಮಾರು 5.46 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಅಚ್ಚರಿ ಎಂದರೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಪ್ರಾಥಮಿಕ ಶಾಲಾ ಶಿಕ್ಷಕ ಮೋಹನ್‌ ಬಳಿ ಸುಮಾರು 1 ಕೋಟಿ 10 ಲಕ್ಷ ರೂಪಾಯಿಗಳ ಅಕ್ರಮ ಆಸ್ತಿ ಪತ್ತೆಯಾಗಿದೆ. ಗುಲ್ಬರ್ಗದ ಕೆಪಿಟಿಸಿಎಲ್‌ ಎಇಇ ವೀರಭದ್ರಪ್ಪ ಸಾಲಿಮನಿಯವರ ಬಳಿ 1.80 ಕೋಟಿ ರೂಪಾಯಿ ಅಕ್ರಮ ಸಂಪಾದನೆಯ ದಾಖಲೆಗಳು ಪತ್ತೆಯಾಗಿವೆ,

ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶಂಕರಪ್ಪ ಬಳಿ ಸುಮಾರು 73 ಲಕ್ಷ ಹಾಗೂ ದಾವಣಗೆರೆಯ ಜಗಳೂರು ಪಟ್ಟಣ ಪಂಚಾಯತ್‌ ಇಂಜಿನಿಯರ್‌ ಶ್ರೀನಿವಾಸ್‌ ಬಳಿ 40 ಲಕ್ಷ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ಅಚ್ಚರಿಯ ಸುದ್ದಿ ಮುಂದಿನ ಪುಟದಲ್ಲಿ...

PR
PR
ಆದ್ರೆ ಈ ಎಲ್ಲರಿಗಿಂತಲೂ ಹೆಚ್ಚು ಅಚ್ಚರಿ ಎಂದರೆ, ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸತ್ಯಾಗಾಲ ಎ.ಜಿ.ಕಾವಲ್‌ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕನಾಗಿರುವ ಮೋಹನ್‌ ಉಳಿದವರಿಗಿಂತಲೂ ಹೆಚ್ಚು ಅಕ್ರಮ ಹಣವನ್ನು ಸಂಪಾದಿಸಿದ್ದಾನೆ ಎಂದು ತಿಳಿದುಬಂದಿದೆ. ಆದ್ರೆ ಪ್ರಾಥಮಿಕ ಶಾಲಾ ಶಿಕ್ಷಕ ಯಾವುದರಲ್ಲಿ ಅಕ್ರಮ ಮಾಡಲು ಸಾಧ್ಯವಿದೆ ಎಂದು ಲೋಕಾಯುಕ್ತರಿಗೆ ಅಚ್ಚರಿಯಾಗಿದೆ.

ಮೋಹನ್ ಹೆಸರಿನಲ್ಲಿ ಎರಡು ಅಂತಸ್ತಿನ 2 ಮನೆ, 360 ಗ್ರಾಂ ಚಿನ್ನ, 1 ಕೆ.ಜಿ. ಬೆಳ್ಳಿ, 20 ಎಕರೆ ಜಮೀನು, ಬೇನಾಮಿ ಹೆಸರಿನಲ್ಲಿ ಜೀಪ್‌, 2 ಐಷಾರಾಮಿ ಕಾರುಗಳು, 4 ದ್ವಿಚಕ್ರ ವಾಹನಗಳು. 93,000 ರೂ. ನಗದು ದೊರಕಿವೆ. ಇವರಿಗೆ ಸೇರಿದ ಅನೇಕ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಅನುದಾನವಾಗಿ ಬರುವಂತಹ ಹಣವನ್ನು ಈತ ಗುಳುಂ ಮಾಡುವುದರ ಮೂಲಕ ಈ ಎಲ್ಲಾ ಅಕ್ರಮಗಳನ್ನು ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೆ ತನಿಖೆಯಿಂದ ಮಾತ್ರವೇ ಎಲ್ಲಾ ಸತ್ಯಾಸತ್ಯಗಳು ಹೊರಬೀಳಲಿವೆ.

ವೆಬ್ದುನಿಯಾವನ್ನು ಓದಿ