ಧನಾತ್ಮಕ ಅಂಶಗಳನ್ನು ಮುಂದಿಡುವುದು ನಮ್ಮ ಅಜೆಂಡಾ: ಜೈರಾಂ ರಮೇಶ್

ಗುರುವಾರ, 24 ಅಕ್ಟೋಬರ್ 2013 (13:25 IST)
PR
PR
ಬೆಂಗಳೂರು: ಕೇಂದ್ರ ಸರ್ಕಾರದ ಧನಾತ್ಮಕ ಅಂಶಗಳನ್ನು ಜನತೆಗೆ ಮನದಟ್ಟು ಮಾಡಬೇಕು. ಧನಾತ್ಮಕ ಅಂಶಗಳನ್ನು ಜನರ ಮುಂದಿಡುವುದೇ ನಮ್ಮ ಅಜೆಂಡಾ ಎಂದು ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಆಹಾರ ಮಸೂದೆಯಿಂದ ರಾಜ್ಯದ ಶೇ. 76ರಷ್ಟು ಪ್ರದೇಶದ ಜನರಿಗೆ ಅನುಕೂಲವಾಗಿದೆ. ಮಸೂದೆಯಿಂದ ರಾಜ್ಯಕ್ಕೆ ಹೆಚ್ಚು ಆಹಾರ ಸಿಗುತ್ತೆ. ಭೂ ಸ್ವಾಧೀನ ಕಾಯ್ದೆ ಮಹತ್ವವಾದುದು.

ಇದರಿಂದ ಜಮೀನು ಕಳೆದುಕೊಂಡವರಿಗೆ ನ್ಯಾಯ ಸಿಗುತ್ತದೆ. ಆರ್‌ಟಿಐ, ಬುಡಕಟ್ಟು ಮಸೂದೆ, ಆಹಾರ ಮಸೂದೆ, ಭೂಸ್ವಾಧೀನ ಮಸೂದೆಗಳನ್ನು ಕೇಂದ್ರ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಪಾರದರ್ಶಕ ಆಡಳಿತ ಕೊಟ್ಟಿದೆ. ಭೂಸ್ವಾಧೀನ ಕಾಯ್ದೆ ಅತ್ಯಂತ ಮಹತ್ವವಾದುದು. ಭೂಮಿಗೆ ಸರಿಯಾದ ಬೆಲೆ ಮತ್ತು ನ್ಯಾಯ ಸಿಗುತ್ತದೆ ಎಂದು ಜೈರಾಂ ರಮೇಶ್ ವಿವರಿಸಿದರು.

ವೆಬ್ದುನಿಯಾವನ್ನು ಓದಿ