ನಕಲಿ ಸಹಿ ಮಾಡಿ 30 ಸಾವಿರ ದೋಚಿದ ಸಮಾಜ ಕಲ್ಯಾಣಾಧಿಕಾರಿ.

ಶುಕ್ರವಾರ, 29 ನವೆಂಬರ್ 2013 (17:34 IST)
PR
PR
ನಕಲಿ ಸಹಿಯನ್ನು ಹಾಕಿ ಸರ್ಕಾರದ ಖಜಾನೆಯ ಹಣವನ್ನು ದೋಚಿದ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ. ಹಣ ದೋಚಿದ ವ್ಯಕ್ತಿ ಯಾರೋ ಅನಾಮಿಕ ಅಲ್ಲ.. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ..!

ಗಂಗಾವತಿ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿ ಟಿ.ಸಿ. ಪ್ರಕಾಶ್ ಅವರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೋಭಾ ಅವರ ನೊಕಲಿ ಸಹಿಯನ್ನು ಮಾಡಿ 30 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಯಾಕಪ್ಪಾ ಹೀಗೆ ಮಾಡಿದೆ ಅಂತ ಕೇಳಿದ್ರೆ, ಇದೆಲ್ಲಾ ಸಮಾಜ ಕಲ್ಯಾಣದ ಕಾರ್ಯಕ್ಕಾಗಿ ಅಂತ ಸುಳ್ಳು ಹೇಳ್ತಾರೆ..

ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ಮತ್ತು ಕಟ್ಟಿಗೆ ಖರೀದಿಸಬೆಕಿತ್ತು. ಹೀಗಾಗಿ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಶೋಭಾ ಅವರ ಸಹಿಯನ್ನು ಫೋರ್ಜರಿ ಮಾಡಿದೆ. ಆ ಮೂಲಕ 30 ಸಾವಿರ ರೂಪಾಯಿಗಳನ್ನು ಪಡೆದು ವಿದ್ಯಾರ್ತಿಗಳಿಗೆ ಊಟ ನೀಡಿದ್ದೇನೆ ಎಂದು ತಮ್ಮ ಸಮಾಜ ಸೇವೆಯ ಪಟ್ಟಿಯನ್ನು ಒಂದೊಂದಾಗಿಯೇ ಬಿಚ್ಚಿಟ್ಟರು..!

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಸಹಿಯನ್ನು ದುರ್ಬಳಕೆ ಮಾಡಿಕೊಂಡಿದ್ದು ಕಾನೂನು ಬಾಹಿರವಾಗಿದ್ದು, ಡ್ರಾ ಮಾಡಿಕೊಂಡ 30 ಸಾವಿರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೋಭಾ ಸರ್ಕಾರಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಜಯರಾಮ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ