ನನ್ನ ಜೀವಕ್ಕೆ ಬೆದರಿಕೆ ಇದೆ, ಸೂಕ್ತ ಭದ್ರತೆ ಒದಗಿಸಿ: ಯಡಿಯೂರಪ್ಪ ಪತ್ರ

ಮಂಗಳವಾರ, 12 ನವೆಂಬರ್ 2013 (15:01 IST)
PR
PR
ಬೆಂಗಳೂರು: ಕೆಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪನವರಿಗೆ ತೀವ್ರವಾದ ಜೀವಬೆದರಿಕೆ ಇದೆಯೇ? ತಮಗೆ ಸೂಕ್ತ ಭದ್ರತೆ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗೃಹಸಚಿವ ಕೆ.ಜೆ. ಜಾರ್ಜ್ ಅವರಿಗೆ ಪತ್ರ ಬರೆದಿರುವುದನ್ನು ಗಮನಿಸಿದರೆ ಹೀಗೆಂದು ಭಾಸವಾಗುತ್ತದೆ. ತಮಗೆ ಸೂಕ್ತ ಭದ್ರತೆ ಒದಗಿಸದ ಸಿಎಂ ವಿರುದ್ಧ ಬಿಎಸ್‌ವೈ ಗರಂ ಆಗಿದ್ದಾರೆ. ಬಿಎಸ್‌ವೈಗಿದ್ದ ಝಡ್ ಶ್ರೇಣಿ ಭದ್ರತೆಯನ್ನು ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರಿನಲ್ಲಿ ಮಾತ್ರ ಬಿಎಸ್‌ವೈಗೆ ಬೆಂಗಾವಲು ಪಡೆ ಇರುತ್ತದೆ.

ಜಿಲ್ಲಾ ಪ್ರವಾಸದಲ್ಲಿ ಅವರಿಗೆ ಬೆಂಗಾವಲು ಪಡೆಯೂ ಸ್ಥಗಿತಗೊಂಡಿದೆ. ನಕ್ಸಲ್ ದಾಳಿ, ಚುನಾವಣಾ ಪ್ರಚಾರದ ಹಿನ್ನೆಲೆ ಬಿಎಸ್‌ವೈ ಭದ್ರತೆ ನೀಡುವಂತೆ ಕೋರಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ 9 ತಿಂಗಳ ನಂತರವೂ ಅವರಿಗೆ ಝಡ್ ಶ್ರೇಣಿ ಭದ್ರತೆ ಒದಗಿಸಲಾಗಿತ್ತು. ಯಡಿಯೂರಪ್ಪ ಜೀವಕ್ಕೆ ಬೆದರಿಕೆಯಿದೆಯೆಂದು ಗುಪ್ತಚರ ವರದಿ ಬಂದಿದ್ದರಿಂದ ಅವರಿಗೆ ಜಡ್ ಶ್ರೇಣಿ ಭದ್ರತೆ ನೀಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಸುನೀಲ್ ಕುಮಾರ್ ಹೇಳಿದ್ದರು.
ಯಡಿಯೂರಪ್ಪನವರಿಗೆ ಭದ್ರತೆ ಏಕೆ ಬೇಕು-ಮುಂದಿನ ಪುಟದಲ್ಲಿದೆ ಮತ್ತಷ್ಟು ಮಾಹಿತಿ

PR
PR
ಆದರೆ ಝಡ್ ಶ್ರೇಣಿ ಭದ್ರತೆಯನ್ನು ಜೀವಕ್ಕೆ ತೀವ್ರ ಬೆದರಿಕೆಯಿರುವ ಸಂದರ್ಭದಲ್ಲಿ ಮಾತ್ರ ನೀಡಲಾಗುತ್ತದೆ. ಯಡಿಯೂರಪ್ಪ ತಮ್ಮ ಜೀವಕ್ಕೆ ಅಂತಹ ಬೆದರಿಕೆಯನ್ನು ಅನುಭವಿಸುತ್ತಿರಲಿಲ್ಲ. ಆದರೂ ಅವರಿಗೆ ಅಧಿಕಾರ ಕೈಬಿಟ್ಟ ಮೇಲೂ ಝಡ್ ಶ್ರೇಣಿ ಭದ್ರತೆಯನ್ನು ಮುಂದುವರಿಸಲಾಗಿತ್ತು. ಸಾಮಾನ್ಯವಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಗೃಹಸಚಿವರು ಅಧಿಕಾರದಲ್ಲಿದ್ದಾಗ ಮಾತ್ರ ಝಡ್ ಶ್ರೇಣಿ ಭದ್ರತೆ ಒದಗಿಸಲಾಗುತ್ತದೆ. ಯಡಿಯೂರಪ್ಪ ಝಡ್ ಶ್ರೇಣಿ ಭದ್ರತೆ ಅನುಭವಿಸಿದ್ದಾಗ,ಸ್ವತಃ ಅವರೇ ತಾವು ಕೋರ್ಟ್‌ಗೆ ಬರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆಂದು ತಿಳಿಸಿದ್ದರು.

ಈಗ ಝಡ್ ಶ್ರೇಣಿ ಭದ್ರತೆ ತೆಗೆದಿರುವುದರಿಂದ ತಮಗೆ ಭದ್ರತೆ ಒದಗಿಸಿ ಎಂದು ಯಡಿಯೂರಪ್ಪ ದುಂಬಾಲು ಬಿದ್ದಿದ್ದಾರೆ. ಝಡ್ ಶ್ರೇಣಿ ಭದ್ರತೆಯಲ್ಲಿ ಅವರ ವಾಹನದ ಮುಂಭಾಗದಲ್ಲಿ ಪೈಲಟ್ ವಾಹನ ಮತ್ತು ಎರಡು ಬೆಂಗಾವಲು ವಾಹನಗಳು ಇರುತ್ತವೆ. ಝಡ್ ಭದ್ರತೆಯ ವ್ಯಕ್ತಿ ರಸ್ತೆಯಲ್ಲಿ ಕಾರಿನಲ್ಲಿ ಹಾದುಹೋಗುವಾಗ ಇತರೆ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗುತ್ತದೆ. ಆದರೆ ಈಗ ಉದ್ಭವಿಸಿರುವ ಪ್ರಶ್ನೆ, ಯಡಿಯೂರಪ್ಪ ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿರುವಾಗ, ಅವರು ರಸ್ತೆಗೆ ಇಳಿದಾಗಲೆಲ್ಲಾ ವಾಹನ ಸಂಚಾರ ತಡೆಯಬೇಕೇ ಎನ್ನುವುದಾಗಿದೆ.

ವೆಬ್ದುನಿಯಾವನ್ನು ಓದಿ