ನನ್ನ ಮರ್ಯಾದೆ ಹೋದ್ರು ಪರ್ವಾಗಿಲ್ಲ : ಅನಂತ ಮೂರ್ತಿ.

ಮಂಗಳವಾರ, 24 ಸೆಪ್ಟಂಬರ್ 2013 (12:29 IST)
PR
PR
ಸಾಹಿತಿಗಳು ಸತ್ಯ ಹೇಳಬೇಕು. ಸತ್ಯಕ್ಕಾಗಿ ಮರ್ಯಾದೆ ಬಿಟ್ಟರೂ ತಪ್ಪಿಲ್ಲ. ಆದರೆ ಸಾಹಿತಿಗಳು ಮರ್ಯಾದೆಗಾಗಿ ಸತ್ಯವನ್ನು ಬಿಡಬಾರದು ಎಂದು ಹೇಳುವುದರ ಮೂಲಕ ಸತ್ಯದ ಪ್ರಖರತೆಯನ್ನು ಒರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ ಯುಆರ್‌ ಅನಂತ ಮೂರ್ತಿ.

ಬೆಂಗಳೂರಿನ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಯುಆರ್‌‌ ಅನಂತ ಮೂರ್ತಿ ಸಾಹಿತಿಗಳು ಸತ್ಯ ನಿಷ್ಟೆಗೆ ಬದ್ಧರಾಗಿರಬೇಕು ಎಂದು ಕರೆ ನೀಡಿದರು. ಯಾರಿಗೂ ಅಂಜದೇ, ಯಾವುದಕ್ಕೂ ಮೋಹಗೊಳ್ಳದೇ ಸತ್ಯವನ್ನು ಬರೆಯಬೇಕು. ಸತ್ಯಕ್ಕಾಗಿ ಮಾನ ಮರ್ಯಾದೆ ಬಿಟ್ಟರೂ ಪರವಾಗಲ್ಲ ಎಂದು ಹೇಳುವುದರ ಮೂಲಕ ಮಾನ ಮರ್ಯಾದೆಗಿಂತ ಸತ್ಯವೇ ಶ್ರೇಷ್ಟ ಎಂಬುದನ್ನು ಒತ್ತಿ ಹೇಳಿದ್ರು.

ನರೇಂದ್ರ ಮೋದಿ ಬಗೆಗಿನ ಹೇಳಿಕೆಯಿಂದ ಯುಆರ್‌ ಅನಂತ ಮೂರ್ತಿಯವರಿಗೆ ಮುಜುಗರವಾಗಿದೆಯೇ? ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..

PTI
PTI
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಯುಆರ್‌ ಅನಂತ ಮೂರ್ತಿಯವರು ಈ ಹಿಂದೆ ಮೋದಿಯ ವಿಚಾರದಲ್ಲಿ ವಿವಾದಕ್ಕೆ ಈಡಾಗಿದ್ರು. ಮೋದಿ ಭಾರತದ ಪ್ರಧಾನಿಯಾದ್ರೆ ನಾನು ಭಾರತದಲ್ಲಿ ಇರಲೂ ಇಷ್ಟವಿಲ್ಲ ಎಂದು ಹೇಳಿದ್ರು. ಈ ಸಂಬಂಧ ಮೋದಿ ಬೆಂಬಲಿಗರು ಯುಆರ್‌ ಅನಂತ ಮೂರ್ತಿಯವರಿಗೆ ಮನಿ ಆರ್ಡರ‍್ ಮೂಲಕ ಭಾರತ ಬಿಟ್ಟು ಹೋಗಲು ಬೇಕಾದಷ್ಟು ಹಣವನ್ನು ಕಳಿಸಿಕೊಟ್ಟಿದ್ದರು.

ಈ ವಿಷಯದಿಂದ ತೀವ್ರ ಮುಜುಗರಕ್ಕೆ ಈಡಾಗಿರುವ ಸಾಹಿತಿ ಯುಆರ್‌ ಅನಂತ ಮೂರ್ತಿ "ಸತ್ಯಕ್ಕಾಗಿ ಮಾನ ಮರ್ಯಾದೆ ಬಿಟ್ಟರೂ ಪರವಾಗಿಲ್ಲ. ಆದ್ರೆ ಸತ್ಯವನ್ನು ಹೇಳುವುದು ಸಾಹಿತಿಗಳ ಕರ್ತವ್ಯ. ಹೀಗಾಗಿ ನಾನು ಸತ್ಯವನ್ನು ಹೇಳಿದ್ದೇನೆ." ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ