ನರೇಂದ್ರ ಮೋದಿ ಕೃಷ್ಣ ಪರಮಾತ್ಮನ ಅವತಾರದಂತೆ: ಶ್ರೀರಾಮಸೇನೆ

ಸೋಮವಾರ, 26 ಆಗಸ್ಟ್ 2013 (11:14 IST)
PTI
ದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಅನ್ಯಾಯ, ಅತ್ಯಾಚಾರ ಶೋಷಣೆ ನಡೆಯುತ್ತಿವೆ. ಪ್ರತಿಯೊಬ್ಬ ಹಿಂದುಗಳು ಮೋದಿಯವರನ್ನು ಬೆಂಬಲಿಸಿ ದೇಶದ ಪ್ರಧಾನಿಯಾಗಲು ಸಹಕರಿಸಿದಲ್ಲಿ ದೇಶದಲ್ಲಿ ಉತ್ತಮ ಅಡಳಿತ ಕಾಣಲು ಸಾಧ್ಯವಾಗುತ್ತದೆ. ಮೋದಿ ಕೃಷ್ಣನ ಅವತಾರದಂತೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಶ್ರೀಕೃಷ್ಣ ಪರಮಾತ್ಮನು 'ಎಂದು ಅಧರ್ಮ, ಅಶಾಂತಿ ನಡೆಯುತ್ತದೆಯೋ ಅಂದು ನಾನು ಮತ್ತೆ ಜನ್ಮತಾಳಿ ಬರುತ್ತೇನೆ' ಎಂದು ಹೇಳಿದ್ದನು. ಅದರಂತೆಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೃಷ್ಣನ ಅವತಾರವೆತ್ತಿ ಧರೆಗಿಳಿದಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಜಗತ್ತಿನಲ್ಲಿ ಎಲ್ಲೆಡೆಯೂ ಅತ್ಯಾಚಾರ, ಅನಾಚಾರ, ದೇಶದ್ರೋಹಗಳಂಥ ಕೃತ್ಯಗಳು ನಡೆಯುತ್ತಿದ್ದು, ಇದನ್ನು ನಿರ್ನಾಮ ಮಾಡಲೆಂದೇ ಶ್ರೀಕೃಷ್ಣ ಪರಮಾತ್ಮನು ನರೇಂದ್ರ ಮೋದಿಯ ಅವತಾರದಲ್ಲಿ ಮತ್ತೆ ಜನ್ಮತಳೆದಿದ್ದು, ನಾವೆಲ್ಲ ಹಿಂದೂ ಬಾಂಧವರು ನರೇಂದ್ರ ಮೋದಿಗೆ ಬೆಂಬಲಿಸಬೇಕಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ