ನಿಗೂಢವಾಗಿ ಉಳಿಯಿತು ಹೊಸ ವರ್ಷದ ದಿನದಂದು ಕಾರ್ತಿಕ್ ಸಾವು

ಶನಿವಾರ, 28 ಡಿಸೆಂಬರ್ 2013 (19:17 IST)
PR
PR
ಬೆಂಗಳೂರು: 2012ನೇ ವರ್ಷ ಕಳೆದು 2013ರ ಹೊಸ ವರ್ಷ ಕಾಲಿಡುತ್ತಿದೆ. ಹೊಸ ವರ್ಷದ ಆಚರಣೆಗೆ ಸಜ್ಜಾಗುತ್ತಿದ್ದಂತೆ ಕಳೆದ ವರ್ಷ ಹೊಸ ವರ್ಷದ ಪ್ರಥಮ ದಿನವೇ ಹೊಟೆಲ್‌ವೊಂದರ ಹೊರಗೆ ತೀವ್ರ ಗಾಯಗಳಿಂದ ಮೃತಪಟ್ಟ ಕಾರ್ತಿಕ್ ವಿಷ್ಣುವಿನ ಸಾವಿನ ನಿಗೂಢತೆಯನ್ನು ಬೇಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಕೊಯಮತ್ತೂರಿನ ತಿರುಪುರದ ನಿವಾಸಿಯಾದ ಕಾರ್ತಿಕ್ ವಿಷ್ಣು ಬೆಂಗಳೂರಿಗೆ ಬಂದಿದ್ದನು. 2012ರ ಜನವರಿ ಒಂದರಂದು ಜಯನಗರದ ಸೌತ್ ಎಂಡ್ ವೃತ್ತದ ಬಳಿ ರಕ್ತದ ಮಡುವಿನಲ್ಲಿ ಪ್ರಜ್ಞೆ ತಪ್ಪಿ ಕಾರ್ತಿಕ್ ಬಿದ್ದಿದ್ದರು. ಲಾ ಮಾರ್ವೆಲ್ಲಾ ಹೊಟೆಲ್‌ನಲ್ಲಿ ಅವರು ಇನ್ನೂ 6 ಮಂದಿ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಪಾಲ್ಗೊಂಡ ಕೆಲವೇ ಗಂಟೆಗಳಲ್ಲಿ ಕಾಲ್ದಾರಿಯಲ್ಲಿ ಶವವಾಗಿ ಕಾರ್ತಿಕ್ ಬಿದ್ದಿದ್ದರು.

ಬೆಳಿಗ್ಗೆ 1 ಗಂಟೆಗೆ ಪಾರ್ಟಿ ಮುಗಿಸಿಕೊಂಡು ಹೊಟೆಲ್ ಬಿಟ್ಟಿದ್ದರು. ಹೊಟೆಲ್ ಸಿಸಿಟಿವಿ ಕ್ಯಾಮೆರಾಗಳಲ್ಲಿ ಇದು ದಾಖಲಾಗಿದೆ. ಭದ್ರತಾ ಸಿಬ್ಬಂದಿ ಫುಟ್‌ಪಾತ್‌ನಲ್ಲಿ ಅವರು ಸಾರಿಗೆಗಾಗಿ ಕಾಯುತ್ತಿದ್ದುದನ್ನು ಕಂಡಿದ್ದ. ಅದಾದ ಬಳಿಕ ಕಾರ್ತಿಕ್ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ನೋಡಿ ಪೊಲೀಸರನ್ನು ಕರೆಸಲಾಯಿತು. ಮೊದಲಿಗೆ ಅವರು ಕುಡಿದ ಮತ್ತಿನಲ್ಲಿ ಕೆಳಕ್ಕೆ ಬಿದ್ದು ಗಾಯದಿಂದ ಸತ್ತಿದ್ದಾರೆಂದು ಭಾವಿಸಲಾಗಿತ್ತು.

ಆದರೆ ಕಾರ್ತಿಕ್ ಹೊಟ್ಟೆ, ಮುಖ ಮತ್ತು ತೊಡೆಯಲ್ಲಿ ಚೂರಿಯಿಂದ ಇರಿದ ಗಾಯಗಳಾಗಿತ್ತು. ತನಿಖೆದಾರರು ಸ್ನೇಹಿತರನ್ನು ಪ್ರಶ್ನಿಸಿ, ನಂತರ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಆದರೆ ಕಾರ್ತಿಕ್‌ನನ್ನು ಕೊಲೆ ಮಾಡಿದ ಅಜ್ಞಾತ ವ್ಯಕ್ತಿ ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ವೆಬ್ದುನಿಯಾವನ್ನು ಓದಿ