ನ.24ರೊಳಗೆ ಎಟಿಎಂಗಳಿಗೆ ಭದ್ರತೆ ಒದಗಿಸಲು ಪೊಲೀಸ್ ಆಯುಕ್ತರ ಆದೇಶ

ಗುರುವಾರ, 21 ನವೆಂಬರ್ 2013 (14:18 IST)
PR
PR
ಬೆಂಗಳೂರು:ಎಲ್ಲ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಒದಗಿಸಬೇಕು. ದಿನದ 24 ಗಂಟೆಯೂ ಭದ್ರತೆ ಒದಗಿಸಬೇಕು. ಎಟಿಎಂ ಒಳಗೆ, ಹೊರಗೆ ಸಿಸಿಟಿವಿ ಅಳವಡಿಸಬೇಕು. ಎಟಿಎಂಗಳಲ್ಲಿ ಅಲಾರ್ಮ್ ವ್ಯವಸ್ಥೆ ಮಾಡಬೇಕು. ನವೆಂಬರ್ 24ರೊಳಗೆ ಸಂಜೆ 4 ಗಂಟೆಯೊಳಗೆ ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತ ಔರಾದ್‌‌ಕರ್ ಆದೇಶ ನೀಡಿದ್ದಾರೆ. ಐಪಿಸಿ ಸೆಕ್ಷನ್ 144 ಅನ್ವಯ ರಾಘವೇಂದ್ರ ಔರಾದ್ಕರ್ ಆದೇಶ ನೀಡಿದ್ದಾರೆ. ಬ್ಯಾಂಕ್‌ಗಳಿಗೆ ಈ ಕುರಿತು ಸೂಚನೆ ನೀಡಿದ್ದಾರೆ. ಒಂದು ವೇಳೆ ಮೂರು ದಿನಗಳ ಕಾಲಾವಕಾಶದಲ್ಲಿ ಈ ರೀತಿ ಭದ್ರತೆ ಒದಗಿಸದಿದ್ದರೆ ಎಟಿಎಂಗಳನ್ನು ಮುಚ್ಚಿಸುವುದಾಗಿ ಹೇಳಿದ್ದಾರೆ.

ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಎಂಬ ಮಹಿಳೆಯ ಮೇಲೆ ದುಷ್ಕರ್ಮಿಯ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಕಮೀಷನರ್ ಮೇಲಿನ ಆದೇಶ ನೀಡಿದ್ದಾರೆ. ಬ್ಯಾಂಕ್‌ಗಳು ಎಟಿಎಂಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಭದ್ರತೆ ಒದಗಿಸುವುದು ಬ್ಯಾಂಕ್‌ಗಳ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ