ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ ಸೋಲಿಸಲು ನಿರ್ಧಾರ

ಮಂಗಳವಾರ, 30 ಜುಲೈ 2013 (12:21 IST)
PR
PR
ಬೆಂಗಳೂರು: ವಿಧಾನಪರಿಷತ್‌ನಲ್ಲಿ ಪಂಚಾಯತ್ ರಾಜ್ ತಿದ್ದುಪಡಿಯ ವಿಧೇಯಕವನ್ನು ಸೋಲಿಸಲು ಬಿಜೆಪಿ ನಿರ್ಧರಿಸಿದೆ. ಮಂಗಳವಾರ ಕಲಾಪದಲ್ಲಿ ಎಲ್ಲ ಸದಸ್ಯರು ಹಾಜರಿರಬೇಕು ಎಂದು ಬಿಜೆಪಿ ವಿಪ್ ನೀಡಿದ್ದು, ವಿಧೇಯಕದ ವಿರುದ್ಧ ಮತಹಾಕುವಂತೆ ಅದು ವಿಪ್ ಜಾರಿ ಮಾಡಿದೆ. ವಿಧಾನಸಭೆಯಲ್ಲಿ ಪಂಚಾಯತ್ ರಾಜ್ ವಿಧೇಯಕ ಈಗಾಗಲೇ ಅನುಮೋದನೆ ಪಡೆದಿದ್ದು, ವಿಧಾನಪರಿಷತ್ತಿನಲ್ಲಿ ಅನುಮೋದನೆ ಪಡೆದು ಕಾಯ್ದೆಯಾಗಿ ರೂಪುಗೊಳ್ಳಬೇಕಿದೆ.

ವಿಧಾನಪರಿಷತ್ತಿನಲ್ಲಿ ಒಟ್ಟು 75 ಸದಸ್ಯಬಲವಿದ್ದು, ಅವರ ಪೈಕಿ ಬಿಜೆಪಿ 39, ಕಾಂಗ್ರೆಸ್ 17, ಜೆಡಿಎಸ್ 12 ಸ್ಥಾನಗಳನ್ನು ಹೊಂದಿದೆ. ಪಕ್ಷೇತರ ಒಂದು ಸ್ಥಾನ, ಖಾಲಿ ಸ್ಥಾನ 5 ಮತ್ತು ಸಭಾಪತಿ ಸೇರಿ ಒಟ್ಟು 75 ಸ್ಥಾನಗಳಿವೆ. ಬಿಜೆಪಿ ನೀಡಿರುವ ವಿಪ್‌ನಲ್ಲಿ ಇಂದು ಮತ್ತು ನಾಳೆ ಸದನದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ. ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ವಿಧೇಯಕದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ