ಪತಿಗೆ ಇಂಗ್ಲೆಂಡ್‌ನಲ್ಲಿ ಚಿಕಿತ್ಸೆ ಕೊಡಿಸಿ: ಮಲ್ಲಿಕಾರ್ಜುನ ಬಂಡೆ ಪತ್ನಿಯ ಮನವಿ

ಶನಿವಾರ, 11 ಜನವರಿ 2014 (16:26 IST)
PR
PR
ಗುಲ್ಬರ್ಗ:ಸಚಿವ ಖಮರುಲ್ ಇಸ್ಲಾಂ ಹೈದರಾಬಾದ್ ಯಶೋಧಾ ಆಸ್ಪತ್ರೆಗೆ ಭೇಟಿ ನೀಡಿ ಶೂಟ್‌ಔಟ್‌ನಿಂದ ತೀವ್ರ ಚಿಂತಾಜನಕ ಸ್ಥಿತಿಯಲ್ಲಿರುವ ಮಲ್ಲಿಕಾರ್ಜುನ ಬಂಡೆಯವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಬಾಲಕಿ ಮಲಾಲಳ ತಲೆಗೆ ಗುಂಡು ಹೊಕ್ಕಿದ್ದಾಗ ಅವಳಿಗೆ ಇಂಗ್ಲೆಂಡ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದಳು. .ಇದೇ ರೀತಿ ತಮ್ಮ ಪತಿಗೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಮಲ್ಲಿಕಾರ್ಜುನ ಅವರ ಪತ್ನಿ ಮಲ್ಲಮ್ಮ ಸಚಿವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.

ಮಲ್ಲಿಕಾರ್ಜುನ ಬಂಡೆ ಅವರ ದೇಹಸ್ಥಿತಿ ಇನ್ನೂ ಗಂಭೀರವಾಗಿದೆ. ಮಗನಿಗಾಗಿ ಹೆತ್ತಪ್ಪನು ಕಣ್ಣೀರು ಹರಿಸಿದ್ದಾರೆ. ಮೂರು ದಿನಗಳಿಂದ ಬಂಡೆ ಕೋಮಾಸ್ಥಿತಿಯಲ್ಲಿದ್ದು, ಅವರ ಗುಲ್ಬರ್ಗ ಮನೆಯಲ್ಲಿ ದುಃಖ ಮಡುಗಟ್ಟಿದೆ. ತಮ್ಮ ಪತಿಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಕೂಡಲೇ ಕ್ರಮ ಕೈಗೊಂಡರೆ ಪತಿ ಉಳಿಯಬಹುದು ಎಂದು ಪತ್ನಿ ಮಲ್ಲಮ್ಮ ಕಣ್ಣೀರು ಸುರಿಸುತ್ತಾ ಹೇಳಿದರು.

ವೆಬ್ದುನಿಯಾವನ್ನು ಓದಿ