ಪರಮೇಶ್ವರ್‌ಗೆ ಡಿಸಿಎಂ, ಡಿಕೆಶಿಗೆ ಸಚಿವ ಸ್ಥಾನ ಸಾಧ್ಯತೆ

ಶನಿವಾರ, 24 ಆಗಸ್ಟ್ 2013 (21:51 IST)
PR
PR
ಬೆಂಗಳೂರು: ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಡಾ.ಜಿ. ಪರಮೇಶ್ವರ್ ಅವರಿಗೆ ಡಿಸಿಎಂ(ಉಪ ಮುಖ್ಯಮಂತ್ರಿ) ಸ್ಥಾನವನ್ನು ನೀಡುವ ಸಾಧ್ಯತೆ ದಟ್ಟವಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಪ್ರಬಲ ಖಾತೆಯ ಜವಾಬ್ದಾರಿ ಹೊರಿಸುವ ಸಾಧ್ಯತೆಯಿದೆ. ಪರಮೇಶ್ವರ್ ಅವರಿಗೆ ಡಿಸಿಎಂ ಪಟ್ಟ ನೀಡುವ ಬಗ್ಗೆ ಸೋನಿಯಾ ಗಾಂಧಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ಹೇಳಿವೆ.

ಶೀಘ್ರದಲ್ಲೇ ರಾಜ್ಯಸಚಿವ ಸಂಪುಟವನ್ನು ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆಯೆಂದು ಹೇಳಲಾಗುತ್ತಿದೆ. ಆ ಸಂದರ್ಭದಲ್ಲಿ ಪರಮೇಶ್ವರ್ ಮತ್ತು ಡಿಕೆಶಿ ಅವರಿಗೆ ಈ ಹುದ್ದೆಗಳು ಸಿಗಬಹುದಾದ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ