ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟ್ಯಾಪ್ ಚುನಾವಣೆ ಗಿಮಿಕ್ಕೇ?

ಗುರುವಾರ, 23 ಜನವರಿ 2014 (13:17 IST)
PR
PR
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರೀ ಜೋಷ್‌ನಲ್ಲಿ ಇರುವಂತಿದ್ದು, ನಿನ್ನೆ ನಡೆದ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಲ್ಯಾಪ್‌ಟ್ಯಾಪ್ ಕೊಡುತ್ತದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಘೋಷಣೆ ಮಾಡಿದ್ದರು. ಆದರೆ ಲ್ಯಾಪ್‌ಟ್ಯಾಪ್ ನೀಡುವ ನಿರ್ಧಾರದ ಬಗ್ಗೆ ಇಲಾಖೆಯಲ್ಲೇ ಅಪಸ್ವರ ಕೇಳಿಬಂದಿದೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ , ಹಿರಿಯ ಅಧಿಕಾರಿಗಳಿಗೆ ತಬ್ಬಿಬ್ಬು ಗೊಳಿಸಿದೆ. ಈ ಬಗ್ಗೆ ಅವರಿಗೆ ಗೊತ್ತೇಇಲ್ಲವಂತೆ.

ಅನೇಕ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಮತ್ತು ಹಣ ಬಿಡುಗಡೆ ಮಾಡಿಲ್ಲ. ಮೂಲಸೌಕರ್ಯಕ್ಕೆ 1316 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರೂ ಅದಕ್ಕೆ ಉತ್ತರ ಬಂದಿಲ್ಲ. ಈಗ ಲ್ಯಾಪ್‌ಟ್ಯಾಪ್ ಘೋಷಣೆಯನ್ನು ಸರ್ಕಾರ ಮೊಳಗಿಸಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಲ್ಯಾಪ್‌ಟ್ಯಾಪ್ ಕೊಡಬೇಕಾಗುತ್ತದೆ. ಸಿದ್ದರಾಮಯ್ಯ ಮತ್ತೊಮ್ಮೆ ಎಡವಟ್ಟಿನ ನಿರ್ಧಾರ ತೆಗೆದುಕೊಂಡ್ರಾ ಅಥವಾ ಇದೊಂದು ಚುನಾವಣೆ ಗಿಮಿಕ್ಕೇ ಎಂಬ ಅನುಮಾನ ಮೂಡಿದೆ. ಅಕ್ಕಿಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಏಕಾಏಕಿ ಘೋಷಣೆ ಮಾಡಿ ಕೇಜಿಗೆ ಒಂದು ರೂ. ದರದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿಯನ್ನು ವಿತರಿಸುವುದಕ್ಕೆ ಸರ್ಕಾರ ಪರದಾಡಬೇಕಾಯಿತು. ಈಗ ಉಚಿತ ಲ್ಯಾಪ್‌ಟ್ಯಾಪ್ ಯೋಜನೆ ಕೂಡ ಕಾರ್ಯರೂಪಕ್ಕೆ ಬರುತ್ತದೆಯೇ ಅಥವಾ ಚುನಾವಣೆ ಸ್ಟಂಟೇ ಎನ್ನುವ ಸಂಶಯವನ್ನು ಮೂಡಿಸಿದೆ.

ವೆಬ್ದುನಿಯಾವನ್ನು ಓದಿ