ಫ್ಯಾನ್‌ ಚಿಹ್ನೆಯಡಿ ಬಿಎಸ್ಆರ್ ಅಭ್ಯರ್ಥಿಗಳ ಸ್ಪರ್ಧೆ

ಮಂಗಳವಾರ, 9 ಏಪ್ರಿಲ್ 2013 (08:51 IST)
PR
PR
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತ ಚಿಹ್ನೆಯಾಗಿ ಸೀಲಿಂಗ್‌ ಫ್ಯಾನ್‌ ಲಭಿಸಿದೆ.

ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸೋಮವಾರ ಆದೇಶ ಹೊರಡಿಸಿದ್ದು, ಬಿಎಸ್ಆರ್ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿರಾತಂಕವಾಗಿ ಫ್ಯಾನ್‌ ಚಿಹ್ನೆ ಬಳಸಬಹುದಾಗಿದೆ.

ಕಳೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಎಸ್ಆರ್ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಇದೇ ಫ್ಯಾನ್‌ ಚಿಹ್ನೆಯಡಿ ಸ್ಪರ್ಧಿಸಿದ್ದರು.

ವೆಬ್ದುನಿಯಾವನ್ನು ಓದಿ