ಬಂಡೆ ಸಾವಿನ ಸುತ್ತ ಹರಿದಾಡುತ್ತಿವೆ ಪಿತೂರಿಯ ಸಿದ್ಧಾಂತಗಳು

ಗುರುವಾರ, 16 ಜನವರಿ 2014 (17:07 IST)
PR
PR
ಗುಲ್ಬರ್ಗಾ: ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಸುತ್ತ ಪಿತೂರಿಯ ಸಿದ್ಧಾಂತಗಳು ಗುಲ್ಬರ್ಗಾದಲ್ಲಿ ಹರಿದಾಡುತ್ತಿವೆ. ಸರ್ಕಾರ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಿಲ್ಲ ಎಂದು ಪ್ರತಿಭಟಿಸಿರುವ ಜನರು ಸಿಬಿಐ ತನಿಖೆಗೆ ಆಗ್ರಹಿಸಿದೆ. ಬಂಡೆ ಅವರು ರೌಡಿ ಮುನ್ನಾ ಜತೆ ಶೂಟ್‌ಔಟ್‌ನಲ್ಲಿ ತಲೆಯೊಳಗೆ ಗುಂಡು ಹೊಕ್ಕು ಮೃತಮಟ್ಟಿದ್ದಾರೆ. ಐಜಿಪಿ ವಜೀರ್ ಅಹ್ಮದ್ ಮುನ್ನಾ ಮೇಲೆ ಗುಂಡು ಹಾರಿಸದಂತೆ ಆದೇಶ ನೀಡಿದ್ದರು ಎಂದು ಪ್ರತಿಭಟನಾಕಾರರ ಗುಂಪೊಂದು ಆರೋಪಿಸಿದೆ. ಈ ಕ್ರಮದ ಹಿಂದಿನ ಉದ್ದೇಶದ ಬಗ್ಗೆ ಅವರು ಅನುಮಾನಗಳನ್ನು ಹುಟ್ಟು ಹಾಕಿದ್ದಾರೆ. ಬಂಡೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆಯ ಪಿಎಸ್‌ಐ ಆಗಿದ್ದರು.

ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ರೈಮ್ ವಿಭಾಗಕ್ಕೆ ವರ್ಗಾಯಿಸಿದರು. ವೃತ್ತಿಯಲ್ಲಿ ಕಟ್ಟುನಿಟ್ಟು, ದಕ್ಷತೆಯಿಂದ ಕೂಡಿದ್ದ ಅವರಿಗೆ ಪಾಠ ಕಲಿಸುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಹೊಂಚುಹಾಕಿದ್ದವು. ಆದರೆ ಬಂಡೆ ಕ್ರೈಮ್ ಬ್ರಾಂಚ್‌ಗೆ ವರ್ಗ ಮಾಡಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿದರು. ಸಮಾಜವಿರೋಧಿ ಶಕ್ತಿಗಳಿಂದ ತುಂಬ ಅಡ್ಡಿ, ಆತಂಕ ಎದುರಿಸಿದರೂ ಅವರು ಜಗ್ಗಿರಲಿಲ್ಲ ಎಂದು ಕೆಲವು ಪೊಲೀಸ್ ಸಿಬ್ಬಂದಿ ಮೂಲಗಳು ತಿಳಿಸಿವೆ.

ಯುವ ಕೇಸರಿ ಸಂಘಟನೆ ಸಂಸ್ಥಾಪಕ ರಾಜು ಭವಾನಿ ಪ್ರಕಾರ, ಬಂಡೆ ಭೂಗತಜಗತ್ತು ಮತ್ತು ಭೂ ಮಾಫಿಯಾದ ಮುಖ್ಯಗುರಿಯಾಗಿದ್ದು, ಅವುಗಳನ್ನು ಎದುರಿಸಲು ಮೇಲಾಧಿಕಾರಿಗಳಿಂದ ಸೂಕ್ತ ಬೆಂಬಲ ಸಿಕ್ಕಿರಲಿಲ್ಲ. ಬಂಡೆಯವರ ಚಿಕಿತ್ಸೆಗೆ ವಿದೇಶಿ ವೈದ್ಯರನ್ನು ಕರೆಸಬೇಕೆಂಬ ಒತ್ತಾಯಕ್ಕೆ ಕೂಡ ಸರ್ಕಾರ ಸರಿಯಾಗಿ ಸ್ಪಂದಿಸಿರಲಿಲ್ಲವೆಂದು ದೂರಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ