`ಬಜೆಟ್ ಸುಳ್ಳಿನ ಸರಮಾಲೆ ಎಂದಿದ್ದೀರಲ್ಲ, ನಿಮ್ಮ ದೃಷ್ಟಿಕೋನ ಬದಲಿಸಿಕೊಳ್ಳಿ`

ಬುಧವಾರ, 26 ಫೆಬ್ರವರಿ 2014 (15:34 IST)
PR
PR
ಬೆಂಗಳೂರು: ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಆರ್ಥಿಕ ಶಿಸ್ತು, ಜನಪರ ಕಾಳಜಿ, ಬೆಳವಣಿಗೆಗೆ ಪೂರಕವಾದ, ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುವ ಬಜೆಟ್. ನುಡಿದಂತೆ ನಡೆದ ಸರ್ಕಾರ, ಜನತೆಗೆ ಕೊಟ್ಟ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಸರ್ಕಾರ, ಕುಮಾರಸ್ವಾಮಿಯವರೇ, ನನ್ನ ಬಜೆಟ್ ಸುಳ್ಳಿನ ಸರಮಾಲೆ ಎಂದು ಹೇಳಿದ್ದೀರಲ್ಲಾ, ನಿಮ್ಮ ದೃಷ್ಟಿಕೋನ ಬದಲಾವಣೆ ಆಗ್ಲಿ ಎಂದು ಹೇಳ್ತಿದ್ದೀನಿ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು. ಸಮಾಜದಲ್ಲಿ ಬದಲಾವಣೆ ತರಬೇಕು, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು ಎಂದ ದೃಷ್ಟಿಯಿಂದ ಬಜೆಟ್ ತಂದಿರುವುದಾಗಿ ಸಿಎಂ ಹೇಳಿದರು.

ಅನ್ನಭಾಗ್ಯ ಅಕ್ಕಿಯ ದುರುಪಯೋಗ ಕುರಿತು ಹೇಳಿಕೆ ನೀಡಿದ ಸಿಎಂ, ಅಧ್ಯಕ್ಷರೇ, ಟಿವಿ ಕಾರ್ಯಕ್ರವೊಂದರಲ್ಲಿ 'ಸಿಎಂ ಹೃದಯ ಒಡೆಯಿತು' ಎಂದು ಕಾರ್ಯಕ್ರಮ ಮಾಡಿದ್ದಾರೆ. ಆದರೆ ಅದರಲ್ಲಿ ಹೇಳುವಷ್ಟು ಮಟ್ಟಿಗೆ ಆಗಿಲ್ಲ. ಕೆಲವು ಭಾಗಗಳಲ್ಲಿ ಅಕ್ಕಿ ಬಳಸುವುದಿಲ್ಲ. ಜೋಳ ಬಳಸುತ್ತಾರೆ. ಅಲ್ಲಿಯೇನಾದರೂ ದುರುಪಯೋಗ ಆಗಿದೆಯಾ ಎಂದು ಪರಿಶೀಲಿಸುತ್ತೇವೆ. ಆದರೆ ಇಡೀ ಅನ್ನಭಾಗ್ಯ ಕಾರ್ಯಕ್ರಮವೇ ದುರುಪಯೋಗವಾಗಿದೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಸಿಎಂ ಹೇಳಿದರು.

ವೆಬ್ದುನಿಯಾವನ್ನು ಓದಿ