ಬಡಜನರ ಸೂರಿಗಾಗಿ 24 ಲಕ್ಷ ಮನೆ ನಿರ್ಮಾಣ

ಭಾನುವಾರ, 19 ಆಗಸ್ಟ್ 2007 (12:26 IST)
ರಾಜ್ಯದಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕ ಆರರಿಂದ ಏಳು ಲಕ್ಷ ಮನೆಗಳಂತೆ ಒಟ್ಟು 24 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವ್ಯದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಶನಿವಾರ ನಡೆದ ಜನತಾ ದರ್ಶನ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ.

ಜನತಾ ದರ್ಶನದಲ್ಲಿ ಅಂಗವಿಕಲರು, ಮಹಿಳೆಯರು ಹಾಗೂ ನಿರುದ್ಯೌಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಒಟ್ಟು 14 ಜನರಿಗೆ ಬಿಎಂಟಿಸಿ ಯಲ್ಲಿ ಉದ್ಯೌಗ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ಅಲ್ಪ ಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ಕೆಲವರಿಗೆ ಆಟೋರಿಕ್ಷಾ ಕೊಡಿಸುವ ಭರವಸೆಯನ್ನೂ ನೀಡಿದರು.

ವೆಬ್ದುನಿಯಾವನ್ನು ಓದಿ