'ಬರೆಯೋ ಧರ್ಮ ನಮ್ಮದು, ಮನಸ್ಸಿಗೆ ನೋವಾದ್ರೆ ಸಹಿಸ್ಕೋಬೇಕು'

ಬುಧವಾರ, 4 ಸೆಪ್ಟಂಬರ್ 2013 (19:51 IST)
PR
PR
ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಬರೆಯೋ ಧರ್ಮ ನಮ್ಮದು. ಅದರಿಂದ ಮನಸ್ಸಿಗೆ ನೋವಾದ್ರೆ ಅದನ್ನು ಸಹಿಸಿಕೊಳ್ಳಬೇಕು. ಹೀಗೊಂದು ನಿರ್ಣಯವನ್ನು ಕೋಮುಸೌಹಾರ್ದ ವೇದಿಕೆ ಸಭೆಯಲ್ಲಿ ಕೈಗೊಳ್ಳಲಾಯಿತು.ಈ ಸಭೆಯಲ್ಲಿ ಗಿರೀಶ್ ಕಾರ್ನಾಡ್ ಮಾತನಾಡುತ್ತಾ, ಲೇಖಕರಿಗೆ ಬಯ್ಯುವ ಎಲ್ಲ ಅಧಿಕಾರವಿದೆ. ಮೊಕದ್ದಮೆ ಹಿಂಪಡೆಯಬೇಕು. ಬರೆಯೋ ಧರ್ಮ ನಮ್ಮದು. ಅದರಿಂದ ನೋವಾದ್ರೆ ಗೊತ್ತಿಲ್ಲ. ನಾವು ಮನಸ್ಸಿಗೆ ನೋವು ಮಾಡುತ್ತೇವಯೇ ಹೊರತು ದೈಹಿಕ ನೋವನ್ನೇನೂ ನೀಡಿಲ್ಲ ಎಂದು ಹೇಳಿದರು.

ಗಣೇಶನ ವಿರುದ್ಧ ಅವಹೇಳನಕಾರಿ ಪುಸ್ತಕ ಬರೆದ ಢುಂಡಿ ಲೇಖಕ ಯೋಗೇಶ್ ಮಾಸ್ಟರ್ ವಿರುದ್ಧ ಮೊಕದ್ದಮೆ ಹಿಂಪಡೆಯಬೇಕು ಮತ್ತು ಆ ಪುಸ್ತಕದ ವಿರುದ್ಧ ನಿಷೇಧ ತೆಗೆಯಬೇಕು ಎಂದು ಕಾರ್ನಾಡ್ ಒತ್ತಾಯಿಸಿದರು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಒಂದು ಧರ್ಮದ ದೇವರನ್ನು ನಿಂದಿಸುವುದರಿಂದ ಆ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

ವೆಬ್ದುನಿಯಾವನ್ನು ಓದಿ