ಬಾಲಕಿಗೆ ಜೂಸ್ ಕುಡಿಸಿ ಗ್ಯಾಂಗ್ ರೇಪ್ ಮಾಡಿದ ದುಷ್ಕರ್ಮಿಗಳು

ಮಂಗಳವಾರ, 19 ನವೆಂಬರ್ 2013 (13:59 IST)
PR
PR
ಬೆಂಗಳೂರು: ಬೆಂಗಳೂರು ಗ್ರಾಮಾಂತರದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಮತ್ತಿನ ಮಾತ್ರೆ ಬೆರೆಸಿದ್ದ ಜೂಸ್ ಕುಡಿಸಿ ದುಷ್ಕರ್ಮಿಗಳು ಗ್ಯಾಂಗ್ ರೇಪ್ ಮಾಡಿದ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ. ಬಾಲಕಿ ದೊಡ್ಡಬೆಲವಂಗಲಾ ಗ್ರಾಮದಲ್ಲಿ ಆರ್ಕೇಸ್ಟ್ರಾ ವೀಕ್ಷಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ರಾಜ್ಯೋತ್ಸವಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಆರ್ಕೇಸ್ಟ್ರಾದಲ್ಲಿ ಹಠಾತ್ ವಿದ್ಯುತ್ ಕಡಿತಗೊಂಡಿದ್ದರಿಂದ ಬಾಲಕಿ ಕತ್ತಲಿನಲ್ಲಿ ಮನೆಗೆ ನಡೆದುಹೋಗುತ್ತಿದ್ದಳು.ಪೊಲೀಸರಿಗೆ ಅವಳು ನೀಡಿದ ದೂರಿನಲ್ಲಿ , ನಾಲ್ವರು ವ್ಯಕ್ತಿಗಳ ಗುಂಪು ಅವಳನ್ನು ಅಡ್ಡಗಟ್ಟಿ, ನಿರ್ಜನ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದರೆಂದು ಆರೋಪಿಸಿದ್ದಾಳೆ.

ಅದೇ ಗ್ರಾಮಕ್ಕೆ ಸೇರಿದ ಇಬ್ಬರು ಆರೋಪಿಗಳ ಹೆಸರನ್ನು ಕೂಡ ಅವಳು ತಿಳಿಸಿದ್ದಾಳೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ಬಂಧಿಸಿದರು.ಆರೋಪಿಗಳು ತನಗೆ ಜೂಸ್ ಕುಡಿಯುವಂತೆ ಬಲವಂತ ಮಾಡಿ ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಬಾಲಕಿ ಆರೋಪಿಸಿದ್ದಾಳೆ. ಸೋಮವಾರ ಬೆಳಿಗ್ಗೆ, ಬಾಲಕಿ ನಿರ್ಜನ ಪ್ರದೇಶದಲ್ಲಿ ಬಿದ್ದಿರುವುದನ್ನು ನೋಡಿದ ಗ್ರಾಮಸ್ಥರು ಅವಳನ್ನು ಮನೆಗೆ ಕರೆದುಕೊಂಡು ಹೋದರು.ಸರ್ಕಾರಿ ಆಸ್ಪತ್ರೆಯ ವೈದ್ಯರು ಬಾಲಕಿಯ ಮೇಲೆ ರೇಪ್ ನಡೆದಿರುವುದನ್ನು ದೃಢಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ