ಬಾಲಕಿಯ ಪ್ರೇಮಿ ಸೇರಿ ನಾಲ್ವರಿಂದ ಗ್ಯಾಂಗ್ ರೇಪ್

ಸೋಮವಾರ, 31 ಮಾರ್ಚ್ 2014 (19:15 IST)
ಬೆಂಗಳೂರು: ಬಾಲಕಿಯ ಪ್ರೇಮಿ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಬೆಂಗಳೂರಿನ ಇಸ್ಲಾಂಪುರದ ಬಾಲಕಿಯ ಮನೆ ಬಳಿ ಅವಳ ಮೇಲೆ ಅತ್ಯಾಚಾರ ಮಾಡಿದ ದಾರುಣ ಘಟನೆ ವರದಿಯಾಗಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಭಾನುವಾರ ಬಾಲಕಿ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ತನ್ನ ಸ್ನೇಹಿತರಿಗೆ ಪರಿಚಯಿಸುವುದಾಗಿ ಹೇಳಿ ನಿರ್ಜನ ಸ್ಥಳಕ್ಕೆ ಬಾಲಕಿಯನ್ನು ಅವಳ ಪ್ರೇಮಿ ಕರೆದುಕೊಂಡು ಹೋದ. ಇನ್ನೂ ಮೂವರು ಅಲ್ಲಿಗೆ ಬಂದಕೂಡಲೇ 16 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಮಾಡಿದರು. ಅತ್ಯಾಚಾರ ಮಾಡಿದ ಕೋಣೆಯು ಅವರ ಪೈಕಿ ಒಬ್ಬನಿಗೆ ಸೇರಿತ್ತು. ಬಾಲಕಿ ಸರಿಯಾಗಿ ಊಟ ಮಾಡದೇ, ಮಾತನಾಡದೇ ಸಪ್ಪೆಮುಖದಲ್ಲಿ ಇದ್ದಿದ್ದನ್ನು ನೋಡಿದ ಬಾಲಕಿ ತಾಯಿ ಏನಾಯಿತೆಂದು ಪದೇ ಪದೇ ಪ್ರಶ್ನಿಸಿದಾಗ ಬಾಲಕಿ ತಾನು ಅನುಭವಿಸಿದ ನರಕಯಾತನೆಯನ್ನು ವಿವರಿಸಿದ ಬಳಿಕ ತಂದೆ, ತಾಯಿ ಪೊಲೀಸರಿಗೆ ದೂರು ನೀಡಿದರು.

ಆರೋಪಿ ಮತ್ತು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರೇಪ್ ನಡೆದಿರುವುದು ದೃಢಪಟ್ಟಿದೆ. ಬಾಲಕಿಗೆ ಸುಮಾರು 2 ವರ್ಷದಿಂದ ಪರಿಚಯವಿದ್ದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿದ್ದ. ಕಳೆದ ನ. 20ರಂದು ಇಬ್ಬರು ಚಲನಚಿತ್ರ ನೋಡಲು ಹೋಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ