ಬಿಜೆಪಿ ವಯೋವೃದ್ದನ ಕೊನೆಯ ಯಾತ್ರೆ; ಹರಿಪ್ರಸಾದ್ ಲೇವಡಿ

ಭಾನುವಾರ, 30 ಅಕ್ಟೋಬರ್ 2011 (12:32 IST)
ರಾಜ್ಯದ ಬಿಜೆಪಿ ನಾಯಕರು ಭ್ರಷ್ಟಾಚಾರ ಎಸಗಿ ಜೈಲು ಸೇರುತ್ತಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ವಿರೋಧಿ ಜನಚೇತನ ಯಾತ್ರೆ ಕೈಗೊಳ್ಳಲು ಅಡ್ವಾಣಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಅಡ್ವಾಣಿ ಯಾತ್ರೆ ಈ ವರ್ಷದ ದೊಡ್ಡ ಜೋಕ್ ಎಂದು ಲೇವಡಿಯಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದು ಬಿಜೆಪಿ ವಯೋವೃದ್ದನ ಕೊನೆಯ ಯಾತ್ರೆ ಎಂದು ಟೀಕಿಸಿರುವ ಹರಿಪ್ರಸಾದ್, ಭ್ರಷ್ಟ ಬಿಜೆಪಿ ಸರ್ಕಾರ ಬರಲು ಜೆಡಿಎಸ್ ಕಾರಣ ಎಂದೂ ಕಿಡಿಕಾರಿದ್ದಾರೆ.

ಭ್ರಷ್ಟಾಚಾರ ವಿರೋಧಿಸಿ ಅಡ್ವಾಣಿ ನೇತೃತ್ವದಲ್ಲಿ ಕೈಗೊಂಡಿರುವ ಜನಚೇತನ ಯಾತ್ರೆ ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 25 ಸಾವಿರ ಆಸನ ವ್ಯವಸ್ಥೆಯಿದ್ದು, ಬೃಹತ್ ವೇದಿಕೆಯನ್ನೂ ಸಿದ್ಧ ಪಡಿಸಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ, ಲೋಕನಾಯಕ ಜೆ.ಪಿ.ನಾರಾಯಣ್ ಅವರ ಜನುಮ ದಿನದಂದೇ ಜನಚೇತನ ಯಾತ್ರೆ ಕೈಗೊಂಡಿರುವ ಬಿಜೆಪಿ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ದೇಶದ ವಿವಿಧ ರಾಜ್ಯಗಳಲ್ಲಿ ಯಾತ್ರೆ ಕೈಗೊಂಡಿದ್ದಾರೆ.

ದಕ್ಷಿಣ ಭಾರತದಲ್ಲಿ ಪ್ರಪಥಮ ಬಾರಿಗೆ ಬಹುಮತದಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷ, ಅಧಿಕಾರ ಪೂರ್ಣಗೊಳಿಸುವ ಮುಂಚಿತವಾಗಿಯೇ ಭ್ರಷ್ಟಾಚಾರ ಆರೋಪದಲ್ಲಿ ನಾಯಕರು ಜೈಲು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಅಡ್ವಾಣಿಯವರ ಭ್ರಷ್ಟಾಚಾರ ವಿರೋಧಿ ಯಾತ್ರೆ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಟೀಕಾ ಪ್ರಹಾರ ನಡೆಸಿವೆ.

ವೆಬ್ದುನಿಯಾವನ್ನು ಓದಿ