ಬಿಜೆಪಿ ಶಾಸಕರ ರೀತಿ ನೀಲಿ ಚಿತ್ರಗಳನ್ನು ನೋಡುವುದಿಲ್ಲ: ರಮಾನಾಥ್ ರೈ

ಬುಧವಾರ, 2 ಏಪ್ರಿಲ್ 2014 (19:04 IST)
PR
PR
ಪುತ್ತೂರು: ನಳಿನ್ ಕುಮಾರ್ ಕಟೀಲ್ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸವಾಲು ಹಾಕಿ ಬಿಜೆಪಿ ಮುಖಂಡರಿಂದ ಟೀಕೆಗೊಳಗಾದ ರಮಾನಾಥ್ ರೈ ತಾವು ವಿಧಾನಸಭೆ ಅಧಿವೇಶನದಲ್ಲಿ ನಿದ್ರೆ ಮಾಡುವುದಕ್ಕೆ ಹೆಸರಾಗಿದ್ದೇನೆ ಎಂಬ ಟೀಕೆಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ರಮಾನಾಥ್ ರೈ ನಿದ್ರೆ ಮಾಡಿರದ ಯಾವುದೇ ಅಧಿವೇಶನವಿದ್ದರೆ ತಾವು ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ನಿನ್ನೆ ಬಿಜೆಪಿ ನಾಯಕ ಅನಂತಕುಮಾರ್ ಸಾರ್ವಜನಿಕ ಕ್ಷಮೆ ಕೋರಿ ರಾಜೀನಾಮೆ ನೀಡುವಂತೆ ರೈಗೆ ಆಗ್ರಹಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ರೈ, ಭೋಜನದ ನಂತರ ಕೆಲವು ಕಾಲ ಕಣ್ಣುಮುಚ್ಚಿಕೊಂಡಿದ್ದರೆ ಅದನ್ನೇ ನಿದ್ರೆಯೆಂದು ತಪ್ಪಾಗಿ ಭಾವಿಸಬಾರದು. ನಾನು ಅಸೆಂಬ್ಲಿಯಲ್ಲಿ ನಿದ್ರೆ ಮಾಡುವುದಿಲ್ಲ, ಅಥವಾ ಕೆಲವು ಬಿಜೆಪಿ ಸಚಿವ ಮತ್ತು ಶಾಸಕರ ರೀತಿ ನೀಲಿ ಚಿತ್ರಗಳನ್ನು ನೋಡುವುದಿಲ್ಲ ಎಂದು ತಿರುಗೇಟು ನೀಡಿದರು.ಪುತ್ತೂರಿನಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ರೈ ಮಾತನಾಡುತ್ತಿದ್ದರು.

ನಾನು ಅರಣ್ಯಸಚಿವನಾಗಿ ನನ್ನ ಸಾಧನೆ ಬಗ್ಗೆ ಹೆಮ್ಮೆಯಿದೆ ಎಂದು ರೈ ಹೇಳಿದರು. ನಳಿನ್‌ಕುಮಾರ್ ಜಿಲ್ಲೆಗೆ ಕೇಂದ್ರದ ಅನುದಾನ ತರುವ ಮಾತಾಡ್ತಾರೆ. ಅದಕ್ಕೆ ಹೆಚ್ಚಿನ ಸಾಮರ್ಥ್ಯ ಅವರಿಗಿಲ್ಲ. ಅವರು ಜಿಲ್ಲೆಗೆ ಯಾವ ಯೋಜನೆಗಳನ್ನು ತಂದಿದ್ದಾರೆ, ಅಭಿವೃದ್ಧಿ ಮಾಡಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.

ವೆಬ್ದುನಿಯಾವನ್ನು ಓದಿ