ಬಿಜೆಪಿ ಸಡಗರಕ್ಕೆ ಸಾಕ್ಷಿಯಾದ ಆಡ್ವಾಣಿ, ರಾಜನಾಥ್, ಕುಂಬ್ಳೆ

ಸೋಮವಾರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ, ದಕ್ಷಿಣ ಭಾರತದಲ್ಲಿ ತಮ್ಮ ಮೊದಲ ಸರಕಾರ ರಚನೆಯನ್ನು ಕಣ್ಣಾರೆ ಕಾಣಲು ಬಿಜೆಪಿ ರಾಷ್ಟ್ರೀಯ ಮುಖಂಡರ ದಂಡೇ ಹರಿದುಬಂದಿತ್ತು.

ರಾಜ್ಯಪಾಲ ರಾಮೇಶ್ವರ್ ಠಾಕೂರ್ ಕನ್ನಡದಲ್ಲಿ ಪ್ರಮಾಣವಚನ ಭೋಧಿಸಿದರು. ಬಿಜೆಪಿಯ ಹಿರಿಯ ಧುರೀಣರಾದ ಲೋಕಸಭೆಯ ವಿರೋಧಪಕ್ಷದ ನಾಯಕ ಲಾಲ್ ಕೃಷ್ಣ ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನೇತಾರ ಯಶವಂತ್ ಸಿನ್ಹ ಹಾಗೂ ಕರ್ನಾಟಕದ ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನ ಅವರೊಂದಿಗೆ ಹಾಜರಿದ್ದರು.

ಜನತಾದಳ (ಎಸ್)ನ ಧುರೀಣರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಚೆಲುವರಾಯಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಮೂಲಗಳ ಪ್ರಕಾರ ಈ ತಿಂಗಳ ಕೊನೆಗೆ ಕುಮಾರಸ್ವಾಮಿಯವರು ತಮ್ಮ ಆಪ್ತ ಸಹೋದ್ಯೋಗಿಗಳೊಂದಿಗೆ ಮತ್ತೊಂದು ಪ್ರತ್ಯೇಕ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಇಂದು ಮಧ್ಯಾಹ್ನ 2 ಗಂಟೆಗೆ ಯಡಿಯೂರಪ್ಪನವರು ಸಂಪುಟ ಸಭೆ ಹಾಗೂ ಶಾಸಕರ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಜನತಾದಳ(ಎಸ್)ನ ಯಾವೊಬ್ಬ ಶಾಸಕರು ಭಾಗವಹಿಸದಿರುವುದು ಯಡಿಯೂರಪ್ಪನವರ ಮುಂದಿನ ಎಡರು ತೊಡರಿನ ಹಾದಿಯನ್ನು ತೋರುವಂತಿದೆ.

ವೆಬ್ದುನಿಯಾವನ್ನು ಓದಿ