ಬಿಬಿಎಂಪಿ ಅಧಿಕಾರಿಗೆ ಗುತ್ತಿಗೆದಾರನ ಬೆದರಿಕೆ ಆರೋಪ

ಗುರುವಾರ, 3 ಅಕ್ಟೋಬರ್ 2013 (14:22 IST)
PR
PR
ಬೆಂಗಳೂರು: ಗುತ್ತಿಗೆದಾರನೊಬ್ಬ ಬಿಬಿಎಂಪಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಬಿಬಿಎಂಪಿ ಅಪರ ಆಯುಕ್ತ ಡಿ.ಕಿರಣ್ ಅವರ ಕಚೇರಿಗೆ ನುಗ್ಗಿ ಗುತ್ತಿಗೆದಾರ ಕೃಷ್ಣಮೂರ್ತಿ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ. ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ್‌ಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಬಿಬಿಎಂಪಿ ಮೇಯರ್ ಸತ್ಯನಾರಾಯಣ್ ಈ ವಿಷಯದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಹೇಳುವುದಾಗಿ ತಿಳಿಸಿದ್ದಾರೆ. ಇಂದು 12 ಗಂಟೆ ಸುಮಾರಿಗೆ ಕಾಮಗಾರಿಯ ಬಿಲ್‌ಗೆ ಸಂಬಂಧಿಸಿದ ವಿಚಾರವಾಗಿ ಕಿರಣ್‌ಗೆ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.

ಕೃಷ್ಣಮೂರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರು ಎಂದು ಹೇಳಲಾಗುತ್ತಿದೆ. ಈ ಕುರಿತು ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಿದಾಗ, ತಮಗೆ 32 ಲಕ್ಷ ರೂ. ಹಣ ಬರಬೇಕಿತ್ತು. ಗುತ್ತಿಗೆದಾರರ ಕಾಮಗಾರಿಗೆ ಸರ್ಕಾರದಿಂದ ಕೋಟ್ಯಂತರ ಹಣ ಬಿಡುಗಡೆಯಾಗಿದ್ದರೂ ನನಗೆ ಹಣ ಮಂಜೂರು ಮಾಡಿಲ್ಲ ಎಂದು ಕೃಷ್ಣಮೂರ್ತಿ ಆಪಾದಿಸಿದ್ದಾರೆ. ಬೇರೆಯವರಿಗೆಲ್ಲ ಕೊಟ್ಟಿದ್ದೀರಿಲ್ಲಾ, ನಮಗೆ ಯಾಕೆ ಕೊಡಲ್ಲ ಎಂದು ಕೇಳಿದ್ದು ನಿಜ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ