ಬಿಬಿಎಂಪಿ ಮಾಸಿಕ ಸಭೆಯ ಭರ್ಜರಿ ಭೋಜನಕ್ಕೆ ಖರ್ಚಾಗುವ ಹಣ 24 ಲಕ್ಷ ರೂ.

ಶನಿವಾರ, 18 ಜನವರಿ 2014 (20:10 IST)
PR
PR
ಬೆಂಗಳೂರು: ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ದಿವಾಳಿ ಅಂಚಿನಲ್ಲಿದೆ. ಆದರೆ ಊಟದ ದರ್ಬಾರ್ ಮಾತ್ರ ಬಿಬಿಎಂಪಿ ವಾರ್ಷಿಕ ಸಭೆಯಲ್ಲಿ ಸದಸ್ಯರಿಗೆ ಮಾಂಸಾಹಾರದ ಊಟ ಬೇಕಾಗಿದೆ. ಹೈದರಾಬಾದ್ ಬಿರ್ಯಾನಿ ಬಿಬಿಎಂಪಿ ಸದಸ್ಯರಿಗೆ ಮುಖ್ಯವಾಗಿ ಬೇಕಾಗಿದೆಯಂತೆ. ಆದಾಯವನ್ನು ಏರಿಸುವ ಕೆಲಸಕ್ಕೆ ಕೈಹಾಕದೇ ಕೌನ್ಸಿಲ್ ಸಭೆಗಳ ಬಗೆ, ಬಗೆಯ ಮಾಂಸ, ಭಕ್ಷ್ಯಭೋಜನಗಳನ್ನು ಸಿದ್ದಪಡಿಸಲು ವಾರ್ಷಿಕ 24 ಲಕ್ಷ ರೂ.ವರೆಗೆ ಟೆಂಡರ್ ಕರೆದಿದೆ. ಪ್ರತಿ ತಿಂಗಳಲ್ಲಿ ಎರಡು ದಿನ ಮಾಸಿಕ ಸಭೆ ನಡೆಯುತ್ತಿದೆ.

ಆದರೆ ಬಿಬಿಎಂಪಿ ಬೊಕ್ಕಸದಲ್ಲಿ ಹಣವೇ ಇಲ್ಲದಿದ್ದರೂ, ಮಾಸಿಕ ಸಭೆಗಳ ಭೋಜನಕ್ಕೆ ಮಾತ್ರ ಲಕ್ಷಗಟ್ಟಲೆ ಖರ್ಚು ಮಾಡುತ್ತಿದೆ. ಹೈದರಾಬಾದ್ ಬಿರ್ಯಾನಿ, ಮಟನ್ ಕಬಾಬ್, ಫಿಷ್ ಕರಿ, ಮಟನ್ ಫ್ರೈ ಇವು ಊಟದ ಪಟ್ಟಿಯಲ್ಲಿವೆ. ಈಗಾಗಲೇ ಸಾಕಷ್ಟು ಕಾಮಗಾರಿಗಳ ಬಗ್ಗೆ ಗುತ್ತಿಗೆದಾರರಿಗೆ ಹಣ ಕೊಡದೇ ಪೆಂಡಿಂಗ್ ಉಳಿದಿವೆ.ಅನೇಕ ಕಟ್ಟಡಗಳನ್ನು ಅಡವಿಟ್ಟು ಸಾಲ ಪಡೆದಿವೆ. ಆದರೂ ಬಿಬಿಎಂಪಿ ದುಂದುವೆಚ್ಚ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

ವೆಬ್ದುನಿಯಾವನ್ನು ಓದಿ