ಬಿ.ಎಸ್.ಆರ್ ಕಾಂಗ್ರೆಸ್; ಶ್ರೀರಾಮುಲು ಹೊಸ ಪಕ್ಷ

ಶನಿವಾರ, 31 ಡಿಸೆಂಬರ್ 2011 (17:42 IST)
PR
ಬಿಜೆಪಿಗೆ ಗುಡ್ ಬೈ ಹೇಳಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶ್ರೀರಾಮುಲು ರಾಜ್ಯದಲ್ಲಿ ಸ್ಫಾಪಿಸಲಿರುವ ಹೊಸ ಪಕ್ಷದ ಹೆಸರು ಬಿ.ಎಸ್.ಆರ್. ಕಾಂಗ್ರೆಸ್ ಎಂದು ಆಪ್ತ ಮೂಲಗಳು ತಿಳಿಸಿವೆ.

ಡಿಸೆಂಬರ್ 28ರಂದೇ ಬಿ.ಎಸ್.ಆರ್ ಕಾಂಗ್ರೆಸ್ ಎಂದು ಹೊಸ ಪಕ್ಷ ನೋಂದಾಯಿಸಿರುವುದಾಗಿ ಹೇಳಿರುವ ಆಪ್ತ ಮೂಲಗಳು, ರಾಜ್ಯ ರಾಜಕೀಯದಲ್ಲಿ ಶೀಘ್ರದಲ್ಲೇ ಬದಲಾವಣೆ ಆಗುವ ಸಾಧ್ಯತೆಗಳಿದ್ದು, ಹೀಗಾಗಿ ಶೀಘ್ರದಲ್ಲೇ ಹೊಸ ಪಕ್ಷ ಕಟ್ಟುತ್ತಿದ್ದೇನೆ. ತಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಈ ಮೊದಲು ಶ್ರೀರಾಮುಲು ಹೇಳಿದ್ದರು.

ಬೆಂಗಳೂರಿನಲ್ಲಿ ಪಕ್ಷದ ಪ್ರಧಾನ ಕಚೇರಿ ಹಾಗೂ ಬಳ್ಳಾರಿಯಲ್ಲಿ ಕಚೇರಿಯನ್ನು ಏಕಕಾಲದಲ್ಲಿ ಪ್ರಾರಂಭಿಸಿ, ಆನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಕಚೇರಿ ಆರಂಭಿಸುವುದಾಗಿ ಮೂಲಗಳು ಮಾಹಿತಿ ನೀಡಿವೆ. ಈ ಮೊದಲು ಬಿಎಸ್ಆರ್ (ಬಡವ, ಶ್ರಮಿಕ ರೈತ) ಪಕ್ಷ ಎಂದು ಹೇಳಲಾಗಿತ್ತು.

ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಸಂಕ್ರಾಂತಿ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಶ್ರೀರಾಮುಲು ಶನಿವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಹೊಸ ಪಕ್ಷದ ಬಗ್ಗೆ ತಾನೇ ಅಧಿಕೃತವಾಗಿ ಶೀಘ್ರವಾಗಿ ಘೋಷಿಸುವುದಾಗಿ ಹೇಳಿದರು.

ಜೆಡಿಎಸ್ ಹಾಗೂ ಜೆಡಿಯು ಚುನಾವಣೆ ವೇಳೆ ನನ್ನ ಬೆಂಬಲಿಸಿತ್ತು. ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ಆ ಪಕ್ಷಗಳನ್ನು ಸೇರುತ್ತೇನೆ ಎಂದು ಯಾರೂ ಭಾವಿಸಬಾರದು ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಇರುವ ಅಹಿಂದಾ ವರ್ಗದ ನಾಯಕರು ನನ್ನ ಭೇಟಿ ಮಾಡಿ, ಹೊಸ ಪಕ್ಷ ಸ್ಥಾಪಿಸುವಂತೆ ಒತ್ತಡ ಹೇರಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಪಕ್ಷ ಸ್ಥಾಪಿಸುವುದಾಗಿ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ