ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ: ಐವರಿಗೆ ಗಾಯ

ಭಾನುವಾರ, 11 ಆಗಸ್ಟ್ 2013 (17:01 IST)
PR
PR
ಬೆಂಗಳೂರು: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಭಾನುವಾರ ಮತ್ತೊಂದು ಕಟ್ಟಡ ಅವಘಡ ಸಂಭವಿಸಿದೆ. ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದುಬಿದ್ದು, ಐವರು ಗಾಯಗೊಂಡಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ. ಕಟ್ಟಡದ ಸೆಂಟ್ರಿಂಗ್ ಕುಸಿತದ ತಕ್ಷಣವೇ ಕಾರ್ಮಿಕರು ಹೊರಗೋಡಿ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಟ್ಟಡದ ಸೆಂಟ್ರಿಂಗ್ ಬೀಳುವ ಹಂತದಲ್ಲಿದ್ದಾಗಲೇ ಅದನ್ನು ಗಮನಿಸಿದ ಕಾರ್ಮಿಕರು ಹೊರಗೋಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಕೆಂಗೇರಿ ಬಂಡೇಮಠದಲ್ಲಿ ಕಟ್ಟಡ ಕುಸಿತದಲ್ಲಿ ಮೂವರು ಸತ್ತ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಈ ಕಟ್ಟಡ ಕುಸಿತ ಸಂಭವಿಸಿದೆ. 15 ಕಾರ್ಮಿಕರು ಸೆಂಟ್ರಿಂಗ್ ಹಾಗೂ ಕಾಂಕ್ರೀಟ್ ಕಾಮಗಾರಿ ನಡೆಸುತ್ತಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ