ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಅಶ್ವಿನಿ ಆತ್ಮಹತ್ಯೆ

ಮಂಗಳವಾರ, 9 ಜುಲೈ 2013 (14:56 IST)
ಬೆಂಗಳೂರು: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಅಶ್ವಿನಿ ನಾಯರ್(23 ವರ್ಷ) ಎಂಬ ಯುವತಿ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಒರಾಕಲ್ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಅಶ್ವಿನಿ ಕಚೇರಿಯ 8ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಅವಳು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಯಿಂದ ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ತಿಳಿಸಿದ್ದಾಳೆ. ಕಳೆದ ಐದು ತಿಂಗಳ ಹಿಂದೆ ಅಶ್ವಿನಿ ಕೆಲಸಕ್ಕೆ ಸೇರಿದ್ದರು.

ವೆಬ್ದುನಿಯಾವನ್ನು ಓದಿ