ಬೆಂಗಳೂರಿನ 'ಸೊಮಾಲಿಯಾ' ಡಿಜೆ ಹಳ್ಳಿಯಲ್ಲಿ ಮೂಗು ಮುಚ್ಚಿಕೊಂಡ ಅಧಿಕಾರಿಗಳು

ಶನಿವಾರ, 31 ಆಗಸ್ಟ್ 2013 (13:25 IST)
PR
PR
ಬೆಂಗಳೂರು: ಬೆಂಗಳೂರಿನ ಸೊಮಾಲಿಯಾ ಎಂದು ಡಿಜೆಹಳ್ಳಿ ಸ್ಲಮ್ ಪ್ರದೇಶವನ್ನು ಸುದ್ದಿವಾಹಿನಿಯೊಂದು ಬಿಂಬಿಸಿದ ಬಳಿಕ ಎಚ್ಚೆತ್ತ ವಿವಿಧ ಇಲಾಖೆಯ ಅಧಿಕಾರಿಗಳು ಶನಿವಾರ ಡಿಜೆ ಹಳ್ಳಿಗೆ ಭೇಟಿ ನೀಡಿದ್ದರು. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಮತ್ತು ಡಿಜೆ ಹಳ್ಳಿಯ ಸಮಸ್ಯೆ ಪರಿಹರಿಸುವುದಾಗಿ ಬಿಬಿಎಂಪಿ ಆಯುಕ್ತರು ಭರವಸೆ ನೀಡಿದರು. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ಡಿಜೆಹಳ್ಳಿಯನ್ನು ನಗರದ ಪ್ರತಿಷ್ಠಿತ ಬಡಾವಣೆಯಾಗಿ ರೂಪಿಸುವುದಾಗಿ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ್ ಆಶ್ವಾಸನೆ ನೀಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡುವ ಮುನ್ನವೇ ಡಿಜೆ ಹಳ್ಳಿ ಸ್ಲಮ್ ಪ್ರದೇಶವನ್ನು ತಕ್ಕಮಟ್ಟಿಗೆ ಶುಚಿಗೊಳಿಸಿದ್ದರೂ, ಅಧಿಕಾರಿಗಳು ಮೂಗನ್ನು ಮುಚ್ಚಿಕೊಂಡೇ ಡಿಜೆ ಹಳ್ಳಿ ಪ್ರದೇಶದಲ್ಲಿ ಓಡಾಡಿ ಪರಿಶೀಲನೆ ನಡೆಸಿದರು.

ವೆಬ್ದುನಿಯಾವನ್ನು ಓದಿ