ಬೆಂಗಳೂರಿನ 1037 ಎಟಿಎಂಗಳಿಗೆ ಬೀಗ : ಇನ್ನಷ್ಟು ಅಚ್ಚರಿ ಮಾಹಿತಿಗಾಗಿ ಈ ಲೇಖನ ಓದಿ.

ಸೋಮವಾರ, 25 ನವೆಂಬರ್ 2013 (11:47 IST)
PR
PR
ನಗರದಲ್ಲಿ ಇರುವ ಸುಮಾರು 2,500 ಎಟಿಎಂಗಳಲ್ಲಿ ಸೂಕ್ತ ಭದ್ರತೆಯಿಲ್ಲದ ಸುಮಾರು 1037 ಎಟಿಎಂಗಳನ್ನು ನೆನ್ನೆ ಮುಚ್ಚಲಾಗಿದೆ. ಭದ್ರತಾ ಸಿಬ್ಬಂದಿಗಳು ಇಲ್ಲದ ಎಟಿಎಂಗಳಿಗೆ ನೆನ್ನೆ ನಗರ ಪೊಲೀಸರು ಬೀಗ ಜಡಿದಿದ್ದಾರೆ. ಭದ್ರತೆ ಒದಗಿಸಿದ ನಂತರ ಎಟಿಎಂಗಳನ್ನು ತೆರೆಯುವಂತ ಪೋಲೀಸ್‌ ಆಯುಕ್ತರು ಮತ್ತು ಗೃಹ ಸಚಿವ ಎಕೆ ಜಾರ್ಜ್‌ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿರುವ ಸುಮಾರು 2,500 ಎಟಿಎಂಗಳಿವೆ. ಇದರಲ್ಲಿ 1037 ಎಟಿಎಂಗಳನ್ನು ತಾತ್ಕಾಲಿವಾಗಿ ಮುಚ್ಚಲಾಗಿದೆ. ಪೋಲೀಸರು ಎಟಿಎಂ ಬಗ್ಗೆ ಹಾಗೆಯೇ ತನಿಖೆ ನಡೆಸುತ್ತಿರುವಾಗ ಬೆಳಕಿಗೆ ಬಂದ ಇನ್ನಷ್ಟು ಆಘಾತಕಾರಿ ಅಂಶವೆಂದರೆ, ಕೆಲವು ಬ್ಯಾಂಕುಗಳು ಎಟಿಎಂ ಸ್ಥಾಪನೆಗೆ ಪರವಾನಗಿಯನ್ನೇ ಪಡೆದಿಲ್ಲ..!

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯಿದೆ- 1976ರ ಅನುಸಾರ ಹಣಕಾಸು ನಡೆಸುವ ವ್ಯವಹಾರ ಎಟಿಎಂ ಕೇಂದ್ರಗಳು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ವ್ಯಾಪಾರ ಅನುಮತಿ ಕೋರಿ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಆದ್ರೆ ಕೆಲವು ಬ್ಯಾಂಕುಗಳು ಈ ನಿಯಮವನ್ನೇ ಪಾಲನೆ ಮಾಡಿಲ್ಲ ಎಂಬುದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ