ಬೆಂಗಳೂರು ಮೆಟ್ರೋ 2ನೇ ಹಂತದ ಕಾಮಗಾರಿಗೆ ಕೇಂದ್ರ ಸಂಪುಟ ಅಸ್ತು

ಗುರುವಾರ, 30 ಜನವರಿ 2014 (15:39 IST)
PR
PR
ಬೆಂಗಳೂರು: ಬೆಂಗಳೂರು ಮೆಟ್ರೋ 2ನೇ ಹಂತದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಪ್ರಧಾನಿ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.ಬೆಂಗಳೂರಿನಲ್ಲಿ ಮೊದಲನೇ ಹಂತದ ಕಾಮಗಾರಿ ಯೋಜನೆ ನಡೀತಿದೆ. ಕಳೆದ ಜುಲೈನಲ್ಲಿ ಎರಡನೇ ಹಂತಕ್ಕೆ ಅನುಮತಿ ನೀಡಬೇಕೆಂದು ಸಿದ್ದರಾಮಯ್ಯ ಮನವಿ ಸಲ್ಲಿಸಿದ್ದರು. 2ನೇ ಹಂತ 75 ಕಿಮೀ ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗಿದೆ.

6 ಮಾರ್ಗಗಳಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆ ನಡೆಯಲಿದ್ದು,,ಬಹುತೇಕ ನಗರದ ಹೊರವಲಯಗಳನ್ನು ಸಂಪರ್ಕಿಸಲಿದೆ. 6 ಮಾರ್ಗಗಳು ಕೆಳಗಿನಂತಿವೆ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌- 15.50 ಕಿ.ಮೀ.ಗೊಟ್ಟಿಗೆರೆ-ಐಐಎಂಬಿ-ನಾಗವಾರ- 21.85 ಕಿ.ಮೀ.ಮೈಸೂರು ರಸ್ತೆ ಟರ್ಮಿನಲ್‌- ಕೆಂಗೇರಿ- 6.45 ಕಿ.ಮೀ.ಹೆಸರಘಟ್ಟ ಕ್ರಾಸ್‌- ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ- 3.77 ಕಿ.ಮೀ. ಆರ್‌.ವಿ.ರಸ್ತೆ- ಬೊಮ್ಮಸಂದ- 18.82 ಕಿ.ಮೀ.

ವೆಬ್ದುನಿಯಾವನ್ನು ಓದಿ