ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು ನಾಮಕರಣ

ಬುಧವಾರ, 17 ಜುಲೈ 2013 (17:59 IST)
PR
ಬಹುದಿನಗಳ ಬೇಡಿಕೆಯಾದ ದೇವನಹಳ್ಳಿ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಹೆಸರು ನಾಮಕರಣ ಮಾಡಲಾಗಿದೆ.

ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವ ವಿಷಯ ಇಂದು ಸಂಪುಟದ ಮುಂದೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೆಂಪೇಗೌಡ ಅವರ 503ನೇ ಜಯಂತಿ ಆಚರಣೆಯ ನಂತರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ `ಬೆಂಗಳೂರು ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡಲು ಒತ್ತಡ ತರಲಾಗಿತ್ತು.

ಮರುನಾಮಕರಣ ಮಾಡುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷ ಸಲ್ಲಿಸಿದ ಪ್ರಸ್ತಾವವನ್ನು ವಿಮಾನಯಾನ ಸಚಿವಾಲಯ ಒಪ್ಪಿತ್ತು. ಈ ಸಂಬಂಧ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರೂ ಒತ್ತಡ ಹೇರಿದ್ದರು.

ವೆಬ್ದುನಿಯಾವನ್ನು ಓದಿ