ಬೆಳೆಗಾರರು, ಕಾರ್ಖಾನೆ ಮಾಲೀಕರ ಬೇಡಿಕೆ ನಡುವೆ ಇಕ್ಕಟ್ಟಿನಲ್ಲಿ ಸರ್ಕಾರ

ಶನಿವಾರ, 30 ನವೆಂಬರ್ 2013 (15:45 IST)
PR
PR
ಕಬ್ಬು ಬೆಳೆಗಾರರು ಬೆಂಬಲ ಬೆಲೆಯನ್ನು 1000 ರೂ.ಗೆ ಏರಿಸಬೇಕೆಂದು ಒಂದು ಕಡೆ ಒತ್ತಾಯಿಸಿದ್ದರೆ, ಇನ್ನೊಂದು ಕಡೆ ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ 2500 ರೂ. ದರ ಕೊಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಅತ್ತ ಬೇಲಿ, ಇತ್ತ ಹುಲಿ ಎನ್ನುವ ಹಾಗೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದೆ. 'ಸರ್ಕಾರದ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ. ಕಳೆದ ವರ್ಷ 25 ಕೋಟಿ ರೂ. ನಷ್ಟವಾಗಿದೆ. ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ಸರ್ಕಾರ ನಿಗದಿಪಡಿಸಿರುವ ಬೆಲೆ ನೀಡಲು ಆಗೋಲ್ಲ. ಟನ್‌ಗೆ 2500 ರೂ. ನೀಡುವುದು ಸಾಧ್ಯವಿಲ್ಲವೆಂದು ಸಕ್ಕರೆ ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಸರ್ಕಾರದ ದರ ಜಾರಿಯಾದ್ರೆ ಕಾರ್ಖಾನೆಗಳಿಗೆ ನಷ್ಟವಾಗುತ್ತದೆ.

ಇಷ್ಟೊಂದು ಬೆಲೆ ಕೊಡಲು ಸಾಧ್ಯವಿಲ್ಲ. ಒತ್ತಾಯಪೂರ್ವಕವಾಗಿ ಹೇರಿದರೆ ಇಡೀ ಕಾರ್ಖಾನೆ ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರದ ದರ ಜಾರಿಯಾದ್ರೆ ಕಾರ್ಖಾನೆಗಳಿಗೆ ಬೀಗ ಹಾಕುವುದಾಗಿಯೂ ತಿಳಿಸಿದ್ದಾರೆ. ಡಿ.2ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 2500 ರೂ. ಕೊಡುವುದರಿಂದ ಕಾರ್ಖಾನೆಗಳಿಗೆ ನಷ್ಟವಾಗುತ್ತದೆ ಎಂದು ಮನವಿ ಸಲ್ಲಿಸಲಾಗುತ್ತದೆ ಎಂದು ಬೆಳಗಾವಿ ಅಥಣಿಯ ರೇಣುಕಾ ಶುಗರ್ಸ್ ಕಂಪನಿ ಮಾಲೀಕರು ತಿಳಿಸಿದರು.

ವೆಬ್ದುನಿಯಾವನ್ನು ಓದಿ