ಬೇರೆ, ಬೇರೆ ಭಾಷೆ ಮಾತಾಡುವಾಗ ಮಾತೃಭಾಷೆ ಹೇಗೆ ನಿರ್ಧರಿಸ್ತೀರಿ, ಸುಪ್ರೀಂ ಪ್ರಶ್ನೆ

ಮಂಗಳವಾರ, 11 ಫೆಬ್ರವರಿ 2014 (18:47 IST)
PR
PR
ಸುಪ್ರೀಂಕೋರ್ಟ್ ಸಂವಿಧಾನ ಪೀಠದಲ್ಲಿ ಭಾಷಾ ಮಾಧ್ಯಮದ ವಿಚಾರವಾಗಿ ರಾಜ್ಯಸರ್ಕಾರದ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಸಾಂವಿಧಾನಿಕವಾಗಿಯೂ ಕಲ್ಯಾಣ ರಾಜ್ಯದ ಮಾತನಾಡುತ್ತೀರಿ, ಆದರೆ ನಿಮ್ಮ ವರ್ತನೆ ವ್ಯತಿರಿಕ್ತವಾಗಿದೆ. ಮೂಲಭೂತ ಹಕ್ಕನ್ನು ಉಲ್ಲಂಘಿಸಬಾರದು. ಮಕ್ಕಳು ಬೇರೆ ಬೇರೆ ಭಾಷೆಯನ್ನು ಮಾತನಾಡುವಾಗ ಮಾತೃಭಾಷೆಯನ್ನು ಹೇಗೆ ನಿರ್ಧರಿಸುತ್ತೀರಿ ಎಂದು ಸುಪ್ರೀಂಕೋರ್ಟ್ ಪ್ರಶ್ನೆಯನ್ನು ಮಂಡಿಸಿದೆ.
1994, ಏಪ್ರಿಲ್ 29ರಂದು ರಾಜ್ಯದಲ್ಲಿನ ಎಲ್ಲಾ ಶಾಲೆಗಳು 1-5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ, ಅನುದಾನರಹಿತ ಶಾಲೆಗಳುಹೈಕೋರ್ಟ್ ಮೆಟ್ಟಿಲೇರಿದ್ದವು.

ವಿಚಾರಣೆ ನಡೆಸಿದ ಹೈಕೋರ್ಟ್ 1994ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ 2008ರ ಜುಲೈ 2ರಂದು ಹೈಕೋರ್ಟ್ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿತ್ತು.
ತಮ್ಮ ಮಕ್ಕಳು ಯಾವ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ನಿರ್ಧಾರ ಮಾಡುವ ಸ್ವಾತಂತ್ರ್ಯ ಪೋಷಕರಿಗಿದೆ ಎಂದು ತೀರ್ಪಿನಲ್ಲಿ ಹೇಳಿತ್ತು. ಈ ತೀರ್ಪಿನ ವಿರುದ್ದ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು.

ವೆಬ್ದುನಿಯಾವನ್ನು ಓದಿ