ಬೇಲೇಕೇರಿ ಅದಿರು ನಾಪತ್ತೆಯಲ್ಲಿ ಕಾಂಡೋಮ್ ಕಂಪನಿ ಭಾಗಿ

ಶನಿವಾರ, 9 ನವೆಂಬರ್ 2013 (19:19 IST)
PR
PR
ಬೇಲೇಕೇರಿ ಬಂದರು ಅದಿರು ನಾಪತ್ತೆ ಪ್ರಕರಣದಲ್ಲಿ ಪ್ರಮುಖ ರಾಜಕಾರಣಿಗಳು, ಗಣಿದಣಿಗಳು ಭಾಗಿಯಾಗಿರುವ ನಡುವೆ, ಕಾಂಡೋಮ್ ಮತ್ತು ಜನನನಿಯಂತ್ರಣ ಮಾತ್ರೆಗಳ ಉತ್ಪಾದನೆ ಕಂಪನಿಯೊಂದು ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಸಿಬಿಐ ಹದ್ದಿನಕಣ್ಣಿಗೆ ಸಿಕ್ಕಿಬಿದ್ದಿದೆ. ಎಚ್‌ಎಲ್‌ಎಲ್ ಲೈಫ್ ಕೇರ್ ಕಂಪನಿ(ಮುಂಚೆ ಹಿಂದೂಸ್ತಾನ್ ಲೇಟೆಕ್ಸ್ ಲಿ.) ಸಿಬಿಐ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ನಲ್ಲಿ ಕೇಸು ದಾಖಲು ಮಾಡಿದ 22 ಕಂಪನಿಗಳ ಪೈಕಿ ಒಂದಾಗಿದೆ. ಸಿಬಿಐ ಈ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ತಿರುವನಂತಪುರ ಮೂಲದ ಕಂಪನಿ ಬೆಂಗಳೂರಿನ ಬಾಣಸವಾಡಿಯಲ್ಲಿ ಮಾರ್ಕೆಟಿಂಗ್ ಕಚೇರಿ ಹೊಂದಿದೆ.ಎಚ್‌ಎಲ್‌ಎಲ್ ಲೈಫ್ ಕೇರ್ 1,06, 739 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕ್ರಮಬದ್ಧ ಪರ್ಮಿಟ್ ಇಲ್ಲದೇ ಬೇಲಕೇರಿ ಬಂದರಿನಿಂದ ರಫ್ತು ಮಾಡಿರುವುದಾಗಿ ಸಿಬಿಐ ಕೇಸ್ ದಾಖಲಿಸಿದೆ.ಕಂಪನಿಯ ವೆಬ್‌ಸೈಟ್ ತಡಕಾಡಿದರೆ ಮಾತ್ರ ಎಚ್‌ಎಲ್‌ಎಲ್ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಂಡೋಮ್ ತಯಾರಿಸುವ ಕಂಪನಿಯಾಗಿದೆ.

ವಾರ್ಷಿಕ 1.316 ಶತಕೋಟಿ ಕಾಂಡೋಮ್ ತಯಾರಿಸುವ ಪ್ರಮುಖ ಕಾಂಡೋಮ್ ಉತ್ಪಾದಕ ಕಂಪನಿಯಾಗಿದೆ.ಆದರೆ ಅನೇಕ ವರ್ಷಗಳಿಂದ ಕಬ್ಬಿಣದ ಅದಿರು ಮಾರಾಟದಲ್ಲಿ ಕೂಡ ಅದು ಭಾಗಿಯಾಗಿದೆ.

ವೆಬ್ದುನಿಯಾವನ್ನು ಓದಿ