ಭ್ರಷ್ಟಾಚಾರ; ಕೇಂದ್ರವನ್ನು ರಾಜ್ಯದ ಜತೆ ಹೋಲಿಸಲಾಗದು: ಸಿಎಂ

ಮಂಗಳವಾರ, 25 ಅಕ್ಟೋಬರ್ 2011 (10:16 IST)
ಕೇಂದ್ರ ಸರಕಾರದ ಹಲವು ಸಚಿವರ ಮೇಲೆರುವ ಆರೋಪಗಳಂತೆಯೇ ರಾಜ್ಯದ ಬಿಜೆಪಿ ಸರಕಾರದ ಹಲವು ನಾಯಕರ ಮೇಲೆಯೂ ಭ್ರಷ್ಟಾಚಾರ ಪ್ರಕರಣ ಬಯಲಿಗೆ ಬಂದಿತ್ತು. ಆದರೆ ಭ್ರಷ್ಟಾಚಾರ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರ ಮೇಲಿನ ಆರೋಪಗಳಿಗೆ ಬಹಳ ವ್ಯತ್ಯಾಸವಿದ್ದು, ಎರಡನ್ನೂ ಹೋಲಿಸಲಾಗದು ಎಂದು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲು ಬಯಸಿದ ಮುಖ್ಯಮಂತ್ರಿ ಸದಾನಂದ ಗೌಡ ಅವರು, ರಾಜ್ಯದ ಬಿಜೆಪಿ ಮುಖಂಡರ ವಿರುದ್ಧ ಆರೋಪ ಹೊರಿಸುವ ಕೆಲಸ ವ್ಯವಸ್ಥಿತ ಷಡ್ಯಂತ್ರವಾಗಿ ನಡೆಯುತ್ತಿದೆ. ಅದೇ ಹೊತ್ತಿಗೆ ಕೇಂದ್ರದ ಯುಪಿಎ ಸರಕಾರದಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆದವರು ಖಾಸಗಿ ವ್ಯಕ್ತಿಗಳಲ್ಲ ಬದಲಾಗಿ ಸಂವಿಧನಾತ್ಮಕ ಸಂಸ್ಥೆಗಳಾಗಿವೆ ಎಂದಿದ್ದಾರೆ.

ಕೇಂದ್ರದ ಯುಪಿಎ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಗೂ ರಾಜ್ಯ ಸರಕಾರದ ಸಚಿವರ ವಿರುದ್ಧದ ಆರೋಪಗಳಿಗೂ ಬಹಳ ವ್ಯತ್ಯಾಸವಿದೆ. ರಾಜಕೀಯ ಪ್ರೇರಿತವಾಗಿ ರಾಜ್ಯ ನಾಯಕರ ಮೇಲೆ ಆರೋಪ ಹೊರಿಸುವ ಪ್ರಕರಣ ನಡೆಯುತ್ತಿದೆ ಎಂದವರು ಆಪಾದಿಸಿದ್ದಾರೆ.

ದೀಪಾವಳಿ ಶುಭಾಶಯ....
ಅದೇ ಹೊತ್ತಿಗೆ ಕತ್ತಲಿನಿಂದ ಬೆಳಕಿನೆಡೆಗೆ ಸಂದೇಶ ಸಾಗುವ ಬೆಳಕಿನ ಹಬ್ಬ ದೀಪಾವಳಿಯು ರಾಜ್ಯದ ಜನತೆಗೆ ಸಂತೋಷ, ಸಮೃದ್ಧಿ ತರಲಿ ಎಂದು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಶುಭ ಹಾರೈಸಿದ್ದಾರೆ.

ನ. 3ರಂದು ಜೆಡಿಎಸ್ ಪ್ರತಿಭಟನೆ...
ಏತನ್ಮಧ್ಯೆ ರಾಜ್ಯ ಸರಕಾರದ ಮಲತಾಯಿ ಧೋರಣೆಯನ್ನು ಪ್ರತಿಭಟಿಸಿದ ನವೆಂಬರ್ 3ರಂದು ಮುಖ್ಯಮಂತ್ರಿ ನಿವಾಸದೆದರು ಜೆಡಿಎಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್. ಡಿ. ರೇವಣ್ಣ ಎಚ್ಚರಿಕೆ ರವಾನಿಸಿದ್ದಾರೆ.

ರಾಜ್ಯ ಸರಕಾರವು ಹಾಸನವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಮಲತಾಯಿ ಧೋರಣೆ ತಾಳಿದೆ. ಈ ಹಿನ್ನಲೆಯಲ್ಲಿ ಸಿಎಂ ನಿವಾಸದೆದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ