ಮಂಜುಳಾಗೆ ಒಟ್ಟು 6000 ರೂ. ಜೀವನಾಂಶ ನೀಡಲು ಚಂದ್ರಚೂಡ್‌ಗೆ ಆದೇಶ

ಸೋಮವಾರ, 28 ಅಕ್ಟೋಬರ್ 2013 (18:26 IST)
PR
PR
ಬೆಂಗಳೂರು: ಚಂದ್ರಚೂಡ್ ಅವರು ಮಂಜುಳಾಗೆ ಪ್ರತಿತಿಂಗಳು 6000 ರೂ. ಕೊಡಬೇಕು ಎಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಜೀವನಾಂಶ 3 ಸಾವಿರ, ಮನೆ ಬಾಡಿಗೆ ಮೂರು ಸಾವಿರ ಒಟ್ಟು ಆರು ಸಾವಿರ ನೀಡಲು ಕೋರ್ಟ್ ಆದೇಶ ನೀಡಿದೆ. ಚಂದ್ರಚೂಡ್-ಮಂಜುಳಾ ದಾಂಪತ್ಯಕ್ಕೆ ಸಂಬಂಧಿಸಿದಂತೆ ಮಂಜುಳಾ ಜೀವನಾಂಶ ಕೋರಿ ಅರ್ಜಿಸಲ್ಲಿಸಿದ್ದಳು. ಮಂಜುಳಾ 35,000 ರೂ. ಜೀವನಾಂಶ ನೀಡಬೇಕೆಂದು ಆಗ್ರಹಿಸಿದ್ದರು. ಮುಂದಿನ ಆದೇಶ ಬರುವವರೆಗೆ ಪ್ರತಿ ತಿಂಗಳು ಚಂದ್ರಚೂಡ್ ಮಂಜುಳಾಗೆ 6000 ರೂ. ಕೊಡಬೇಕಾಗುತ್ತದೆ.

ಚಂದ್ರಚೂಡ್ ಮತ್ತು ಚಿತ್ರನಟಿ ಶ್ರುತಿ ವಿವಾಹ ವಿವಾದದ ಸ್ವರೂಪ ಪಡೆದುಕೊಂಡು ವಿವಾಹ ರದ್ದು ಮಾಡಬೇಕೆಂದು ಕೋರಿ ಚಂದ್ರಚೂಡ್ ಪತ್ನಿ ಮಂಜುಳಾ ಅರ್ಜಿ ಸಲ್ಲಿಸಿದ್ದರು. ನಂತರ ಸ್ವತಃ ಶ್ರುತಿ ವಿವಾಹ ರದ್ದತಿಗೆ ಒಪ್ಪಿಕೊಂಡಿದ್ದರಿಂದ ಅವರಿಬ್ಬರ ನಡುವೆ ವಿವಾಹ ರದ್ದಾಗಿತ್ತು.

ವೆಬ್ದುನಿಯಾವನ್ನು ಓದಿ