ಮಕ್ಕಳ ಬೆನ್ನಿನ ಮೇಲೆ ನಡೆದ ಗುಜರಾತ್ ಬಿಜೆಪಿ ಅಭ್ಯರ್ಥಿ

ಸೋಮವಾರ, 24 ಮಾರ್ಚ್ 2014 (12:55 IST)
PR
PR
ರಾಜಕೋಟ್: ನರೇಂದ್ರ ಮೋದಿ ಆಡಳಿತದ ಗುಜರಾತಿನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಮಕ್ಕಳ ಬೆನ್ನಿನ ಮೇಲೆ ನಡೆದುಕೊಂಡು ಹೋದ ಸನ್ನಿವೇಶವನ್ನು ಕ್ಯಾಮೆರಾ ಸೆರೆಹಿಡಿದಿದೆ. ಬಿಜೆಪಿಯ ರಾಜಕೋಟೆ ಕ್ಷೇತ್ರದ ಅಭ್ಯರ್ಥಿ ಮೋಹನ್ ಕುಂಡಾರಿಯಾ ಶಾಲಾ ಮಕ್ಕಳ ಬೆನ್ನಿನ ಮೇಲೆ ರಾಜಾರೋಷವಾಗಿ ನಡೆದ ಘಟನೆಯನ್ನು ವಿಡಿಯೋ ಚಿತ್ರ ಸೆರೆಹಿಡಿದಿದ್ದು, ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್‌ನಲ್ಲಿ ದಾಖಲಾಗಿದೆ. ಯೋಗ ಶಿಬಿರದಲ್ಲಿ ಈ ವಿಡಿಯೋ ಚಿತ್ರವನ್ನು ತೆಗೆಯಲಾಗಿದೆ.

ಮಕ್ಕಳು ಬೆನ್ನುಬಗ್ಗಿಸಿ ಸಾಲಾಗಿ ನಿಂತಿದ್ದಾಗ ಅವರ ಬೆನ್ನಿನ ಮೇಲೆ ನಡೆದುಕೊಂಡು ಹೋದ ಅಭ್ಯರ್ಥಿ, ಮಕ್ಕಳ ಯೋಗ ಕೌಶಲ್ಯದ ಪ್ರದರ್ಶನವೆಂದು ಹೇಳಿದ್ದಾರೆ.ಆದರೆ ಬಿಜೆಪಿ ಮುಖಂಡರ ಇಂತಹ ನಡೆ ವಿರುದ್ಧ ಸಾಮಾಜಿಕ ತಾಣದಲ್ಲಿ ಟೀಕೆಗಳು ಕೇಳಿಬಂದಿವೆ.

ವೆಬ್ದುನಿಯಾವನ್ನು ಓದಿ