ಮಗುವೊಂದು ಮೀನು ನುಂಗಿತ್ತಾ...!

ಮಂಗಳವಾರ, 25 ಫೆಬ್ರವರಿ 2014 (18:16 IST)
PTI
ಕೈಗೆ ಸಿಕ್ಕಿದ್ದನ್ನು ಬಾಯಲ್ಲಿಡುವುದು ಪುಟ್ಟ ಪುಟ್ಟ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಗುಣ. ತಾವು ಬಾಯಿಗಿಡುವ ವಸ್ತು ತಮಗೆ ಅಪಾಯಕಾರಿ ಎಂಬುದನ್ನು ತಿಳಿಯಲಾರವು ಆ ಮುಗ್ಧ ಕಂದಮ್ಮಗಳು. ಇಲ್ಲಿ ನಡೆದಿದ್ದು ಅದೇ; ಅಪ್ಪ ತಂದಿಟ್ಟಿದ್ದ ಮೀನನ್ನು ಗುಳುಂ ಎಂದು ನುಂಗಿ ಪೇಚಾಡಿದ ಮಗುವೊಂದು ಆಸ್ಪತ್ರೆಗೆ ಸೇರುವಂತಾಗಿದೆ.

ಹರಿಹರ ತಾಲ್ಲೂಕಿನ ಹಳ್ಳಿಯೊಂದರ ನಿರ್ಮಲಾ ಎಂಬುವವರ 18 ತಿಂಗಳ ಮಗು ವೀರಭದ್ರ ಆಡುತ್ತ ಆಡುತ್ತ ಅಡುಗೆ ಮಾಡಲು ತಂದಿಟ್ಟಿದ್ದ ಮೀನನ್ನು ಕೈಯಲ್ಲಿ ಹಿಡಿದಿದೆ. ನಿಧಾನವಾಗಿ ಅದನ್ನು ಬಾಯಿಗಿಟ್ಟ ಕೂಸು ಅದನ್ನು ನುಂಗೇ ಬಿಟ್ಟಿದೆ. ಆದರೆ ಅನ್ನನಾಳದ ಮೂಲಕ ಜಠರ ಕ್ಕೆ ಇಳಿಯಬೇಕಾದ ಮೀನು ಶ್ವಾಸಕೋಶದ ನಾಳದಲ್ಲಿ ಸೇರಿಕೊಂಡಿದೆ.

ಪ್ರಾಣಾಪಾಯಕ್ಕೆ ಸಿಲುಕಿದ ಮಗುವನ್ನು ಬದುಕಿಸುವಲ್ಲಿ ಶಿವಮೊಗ್ಗದ ವಾತ್ಯಲ್ಯ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಮೀನು 6 ಸೆಂ.ಮಿ ಉದ್ದವಿತ್ತು ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ