ಮಲ್ಟಿಪ್ಲೆಕ್ಸ್ ಆಗಲಿದೆ ಪುಟ್ಟಣ್ಣ ಚಿತ್ರಮಂದಿರ

ಐತಿಹಾಸಿಕ ಪುಟ್ಟಣ್ಣ ಚಿತ್ರ ಮಂದಿರಕ್ಕೆ ಮಲ್ಟಿಪ್ಲೆಕ್ಸ್ ಸ್ಪರ್ಶ ಸಿಗಲಿದೆ. ಬೆಂಗಳೂರಿನ ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸದ್ಯ ಮುಚ್ಚಲ್ಪಟ್ಟಿರುವ ಈ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್ ಗೆ ರೂಪಾಂತರಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಕೇವಲ ಕನ್ನಡ ಸಿನೆಮಾಗಳಿಗೆ ಮಾತ್ರ ಸೀಮಿತವಾಗಿರುವ ಈ ನೂತನ ಚಿತ್ರಮಂದಿರದ ಆರಂಭಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯುವುದು ಸರ್ಕಾರದ ಚಿಂತನೆ.

2004 ಮೇ 11ರಿಂದ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ಮುಚ್ಚಿತ್ತು. ಅನಂತರದಲ್ಲಿ ನೂತನ ಚಿತ್ರಮಂದಿರವಾಗಿ ಪರಿವರ್ತಿಸುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತ್ತು.
ಈಗಾಗಲೇ ಈ ಸಂಬಂಧ ಟೆಂಡರ್ ಕರೆದಿದ್ದು, ಇಬ್ಬರು ಬಿಡ್ ದಾರರು ಈ ಸಂಬಂಧ ಮುಂದೆ ಬಂದಿದ್ದಾರೆ.ಈ ಸಂಬಂಧ ಇನ್ನೂ ಹೆಚ್ಚಿನ ಬಿಡ್ ದಾರರನ್ನು ಆಕರ್ಷಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ವೆಬ್ದುನಿಯಾವನ್ನು ಓದಿ