ಮಹಡಿ ಮೇಲಿಂದ ಬಿದ್ದ ಮಾನಸಿಕ ಅಸ್ವಸ್ಥನ 'ಆತ್ಮಹತ್ಯೆ ಪ್ರಹಸನ'

ಶನಿವಾರ, 30 ನವೆಂಬರ್ 2013 (13:57 IST)
PR
PR
ಜೆ.ಪಿ. ನಗರದಲ್ಲಿ ಬಿಬಿಎಂಪಿ ಸದಸ್ಯರೊಬ್ಬರ ಮನೆಯ ಮೂರನೇ ಮಹಡಿ ಮೇಲೆ ಹತ್ತಿದ ಮಾನಸಿಕ ಅಸ್ವಸ್ಥನೊಬ್ಬ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಮಹಡಿಯ ಮೇಲಿನಿಂದ ಕೆಳಗೆ ಜಿಗಿದೇಬಿಟ್ಟ ಆಸಾಮಿ. ಅದೃಷ್ಟವಶಾತ್ ಅವನ ರಕ್ಷಣೆಗಾಗಿ ಪೊಲೀಸರು ಕೆಳಕ್ಕೆ ಹಾಕಿದ್ದ ನೆಟ್ ಮೇಲೇ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಅವನು ಕೆಳಗೆ ಬಿದ್ದರೆ ಪ್ರಾಣಾಪಾಯವಾಗಬಾರದು ಎಂದು ಕೆಳಗೆ ನೆಟ್ ವ್ಯವಸ್ಥೆ ಮಾಡಲಾಗಿತ್ತು. ಅವನು ಕೈಯಲ್ಲಿ ಚಾಕು ಕೂಡ ಹಿಡಿದಿದ್ದ. ಅವನಿಗೆ ಚಿರಾಗ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನೆ ಹೇಗಾಯಿತು?
ಬೆಳಿಗ್ಗೆಯೇ ಬಿಬಿಎಂಪಿ ಸದಸ್ಯರೊಬ್ಬರ 3 ಅಂತಸ್ತಿನ ಮನೆಯ ಮೇಲೆ ಹತ್ತಿದ ಮಾನಸಿಕ ಅಸ್ವಸ್ಥ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕುತ್ತಿದ್ದ. ಕೈಯಲ್ಲಿ ಚಾಕುವೊಂದನ್ನು ಕೂಡ ಹಿಡಿದಿದ್ದ. ಹೀಗೆ ಅವನು ಬೆದರಿಕೆ ಹಾಕುತ್ತಿರುವಾಗಲೇ ಕೆಳಗೆ ಬಿದ್ದರೆ ಸಾಯುತ್ತಾನೆಂಬ ಭಯದಿಂದ ಪೊಲೀಸರು ಕೆಳಗೆ ನೆಟ್ ವ್ಯವಸ್ಥೆ ಮಾಡಿದ್ದರು. ನಂತರ ಸ್ಥಳೀಯರೊಬ್ಬರು ಮಹಡಿಯ ಮೇಲೆ ಹತ್ತಿ ಅವನ ಹತ್ತಿರ ಬರುತ್ತಿರುವುದನ್ನು ಕಂಡು ಆಸಾಮಿ ಕೆಳಗೆ ಜಿಗಿದೇ ಬಿಟ್ಟ. ಅದೃಷ್ಟವಶಾತ್ ಕೆಳಗೆ ನೆಟ್ಟ ಹಾಕಿದ್ದರಿಂದ ಅವನ ಜೀವವುಳಿಯಿತು.

ವೆಬ್ದುನಿಯಾವನ್ನು ಓದಿ