ಮುಗಿಯದ ಭಿನ್ನಮತ: ರೆಡ್ಡಿ ಮನೆಯಲ್ಲಿ ರಹಸ್ಯ ಸಭೆ

ಭಾನುವಾರ, 21 ಜೂನ್ 2009 (13:08 IST)
ರಾಜ್ಯ ಬಿಜೆಪಿ ಪಾಳಯದಲ್ಲಿ ಇನ್ನೂ ಕೂಡ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ಸಚಿವ ಜನಾರ್ದನ ರೆಡ್ಡಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿತ್ತು ಎನ್ನುವಾಗಲೇ ನಗರದಲ್ಲಿ ರೆಡ್ಡಿ ಆಪ್ತ ವಲಯದ ಸಚಿವರು-ಶಾಸಕರ ಸಭೆ ನಡೆದಿದೆ.

ಜಿಲ್ಲೆಯ ಸಚಿವತ್ರಯರು ಸೇರಿದಂತೆ ಆನಂದ್ ಆಸ್ನೋಟಿಕರ್, ಬಾಲಚಂದ್ರ ಜಾರಕಿಹೋಳಿ ಸೇರಿದಂತೆ 8 ಸಚಿವರು ಹಾಗೂ 10 ಶಾಸಕರು ಗುಪ್ತ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮಾತುಕತೆ ವಿವರಗಳು ಲಭ್ಯವಾಗಿಲ್ಲ.

ಸಚಿವರು ಮತ್ತು ಶಾಸಕರು ನಗರಕ್ಕೆ ಆಗಮಿಸಿ ನೇರವಾಗಿ ರೆಡ್ಡಿಯವರ ಕುಟೀರಕ್ಕೆ ತೆರಳಿದ್ದಾರೆ. ರಾತ್ರಿ ಸುದೀರ್ಘ ಕಾಲದ ವರೆಗೆ ನಡೆದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ರೆಡ್ಡಿಯವರನ್ನು ಓಲೈಸಲು ಸುಗ್ಗಲಮ್ಮ ದೇವಸ್ಥಾನ ಧ್ವಂಸ ಪ್ರಕರಣ ಸೇರಿದಂತೆ ಅವರ ವಿರುದ್ಧ ಇದ್ದ 16 ಪ್ರಕರಣಗಳನ್ನು ಖುಲಾಸೆಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದರೂ, ಗುಪ್ತ ಸಭೆ ನಡೆಸಿದ್ದ ಔಚಿತ್ಯದ ಬಗ್ಗೆ ಸಂಶಯ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ