ಮೂಕಪ್ರಾಣಿಗಳ ಮೂಕವೇದನೆ: 70 ದನಗಳ ಮಾರಣಹೋಮ

ಶನಿವಾರ, 18 ಜನವರಿ 2014 (19:28 IST)
PR
PR
ರಾಯಚೂರು: ಈ ಮೂಕಪ್ರಾಣಿಗಳ ಮೂಕವೇದನೆ ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತದೆ. ರಾಯಚೂರು ಗೋಶಾಲೆ ಅಧಿಕಾರಿಗಳದ್ದು ಕಲ್ಲುಹೃದಯ. 70ಕ್ಕೂ ಹೆಚ್ಚು ದನಗಳನ್ನು ಸಾಕ್ತೀವಿ ಎಂದು ಹೇಳಿ ತಂದು ಅವಳಿಗೆ ಮೇವು ನೀಡದೇ 70ರಿಂದ 80 ದನಗಳನ್ನು ಕೊಂದುಹಾಕಿದ್ದಾರೆ. ದನಗಳಿಗೆ ಸಾಕಷ್ಟು, ಮೇವು ಹಾಕದೇ ಬಡವಾದ ದನಗಳು ಕೊನೆಗೆ ಸಾವಿಗೆ ಶರಣಾಗಿವೆ. ಗೋಶಾಲೆಯಲ್ಲಿ ಒಂದು ರೀತಿಯ ದನಗಳ ಮಾರಣಹೋಮವೇ ನಡೆದಿದೆ. ವಾತಾವರಣ ಏರುಪೇರಿನಿಂದ ಗೋವುಗಳು ಮೃತಪಟ್ಟಿವೆ ಎಂದು ಗೋಶಾಲೆ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ನಗರಸಭೆ ಅಧಿಕಾರಿಗಳು ಜನರ ತೊಂದರೆ ನಿವಾರಿಸುವುದಕ್ಕೆ ಬೀಡಾಡಿ ದನಗಳನ್ನು ಒಯ್ಡು ಗೋಶಾಲೆಯಲ್ಲಿ ಬಿಟ್ಟಿದ್ದಾರೆ. ಆದರೆ ಗೋಶಾಲೆ ಅಧಿಕಾರಿಗಳು ಅವುಗಳಿಗೆ ಮೇವು, ನೀರು ಸಾಕಷ್ಟು ಹಾಕದೇ ಬಡವಾಗುವಂತೆ ಮಾಡಿ ಉಪವಾಸ ಕೊಂದುಹಾಕಿದ್ದಾರೆ. ಗೋವುಗಳು ಸತ್ತಮೇಲೆ ಅವುಗಳ ಅಂತ್ಯಸಂಸ್ಕಾರವನ್ನು ಕೂಡ ಸರಿಯಾಗಿ ಮಾಡದೇ ಸುತ್ತಲಿನ ವಾತಾವರಣೆ ಕಲ್ಮಶವಾಗಿದೆ. ಗೋಶಾಲೆ ಅಧಿಕಾರಿಗಳು ಹೇಳುವುದೆಂದರೆ ನಮಗೆ ಹಣದ ಕೊರತೆ ಕಾಡುತ್ತಿದ್ದು, ಸರ್ಕಾರ

ವೆಬ್ದುನಿಯಾವನ್ನು ಓದಿ