ಮೆಟ್ರೋ ಎಂಡಿ ಶಿವಶೈಲಂ ವರ್ಗಾವಣೆ, ಪ್ರದೀಪ್ ಸಿಂಗ್ ಅಧಿಕಾರ

ಭಾನುವಾರ, 11 ಆಗಸ್ಟ್ 2013 (12:56 IST)
PR
PR
ಬೆಂಗಳೂರು: ನಮ್ಮ ಮೆಟ್ರೋ ಸಂಪಿಗೆ ರಸ್ತೆ ಮತ್ತು ಪೀಣ್ಯ ನಡುವೆ ರೀಚ್ 3ಕ್ಕೆ ಚಾಲನೆ ನೀಡುತ್ತಿರುವಾಗ, ರಾಜ್ಯಸರ್ಕಾರವು ಶನಿವಾರ ಬೆಂಗಳೂರು ಮೆಟ್ರೋ ರೈಲು ನಿಗಮದ ಎಂಡಿ ಎನ್. ಶಿವಶೈಲಂ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಳದಲ್ಲಿ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋರಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಶಿವಶೈಲಂ 2008ರ ಜೂನ್‌‌ನಿಂದ ಬಿಎಂಆರ್‌ಸಿ ಮುಖ್ಯಸ್ಥರಾಗಿದ್ದರು. ಮೆಟ್ರೋ ಕಾಮಗಾರಿ ಬಳಿಯ ರಸ್ತೆಗಳ ಹದಗೆಟ್ಟ ಪರಿಸ್ಥಿತಿ ಹಿನ್ನೆಲೆಯಲ್ಲಿ ವರ್ಗಾವಣೆಗೆ ಕಾರಣವೆಂದು ಹೇಳಲಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಬಿಎಂಪಿ ಜತೆ ಬಿಎಂಆರ್‌ಸಿಯ ಹೊಂದಾಣಿಕೆ ಕೊರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಶಿವಶೈಲಂನ ಕಾರ್ಯವೈಖರಿ ನೀತಿ ಬಗ್ಗೆ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಕೇಳಿಬಂದಿದ್ದವು. ನಮ್ಮ ಮೆಟ್ರೋ ಈಗ ಒಳ್ಳೆಯ ಕೈಗಳಿಗೆ ಸಿಕ್ಕಿದೆ ಎಂದು ಮೂಲಗಳು ಹೇಳಿವೆ. ಈ-ಸುಗಂನ ದಕ್ಷತೆಗಾಗಿ ಪ್ರಧಾನಮಂತ್ರಿ ಪ್ರಶಸ್ತಿ ಪುರಸ್ಕೃತರಾದ ಖರೋಲಾ ನಾವೀನ್ಯತೆಗೆ ಹೆಸರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ