ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನ

ಮಂಗಳವಾರ, 10 ಡಿಸೆಂಬರ್ 2013 (16:08 IST)
PR
ಮೈಸೂರು ರಾಜವಂಶಸ್ಥ, ಮಾಜಿ ಸಂಸದ, ಕೆಸಿಎ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯವರು ಅವರು ತೀವ್ರ ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

60 ವರ್ಷದ ಒಡೆಯರ್ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1953ರ ಫೆಬ್ರುವರಿ 20ರಂದು ಜನಸಿದ್ದ ಒಡೆಯರ್ ಅವರು ಇತ್ತೀಚೆಗಷ್ಟೆ ಕೆಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಮೈಸರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿಯೂ ಒಡೆಯರ್ ಆಯ್ಕೆಯಾಗಿದ್ದರು.

1399ರಿಂದ 1950ರವರೆಗೂ ಒಡೆಯರ್ ವಂಶ ಮೈಸೂರು ಸಂಸ್ಥಾನದಲ್ಲಿ ಆಡಳಿತ ನಡೆಸುತ್ತಿತ್ತು. 1974ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಾಂಪ್ರದಾಯಿಕವಾಗಿ ಮಹಾರಾಜ ಪಟ್ಟ ಅಲಂಕರಿಸಿದ್ದರು.

ವೆಬ್ದುನಿಯಾವನ್ನು ಓದಿ