ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಬುಧವಾರ, 9 ಏಪ್ರಿಲ್ 2014 (19:56 IST)
PR
PR
ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ಕಾಂಗ್ರೆಸ್ 20 ಸೀಟುಗಳನ್ನು ಗಳಿಸುತ್ತದೆ. ಶೇ. 90ರಷ್ಟು ಮತದಾನವಾದರೆ, ಜನಾರ್ದನ ಪೂಜಾರಿ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ತಾರೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ. ಪೂಜಾರಿ ಪರ ಕಸ್ಬಾ ಬೇಂಗ್ರೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಇಬ್ರಾಹಿಂ ಮಾತನಾಡುತ್ತಿದ್ದರು.ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ ಮತ್ತು ಅನಂತಕುಮಾರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಗುತ್ತದೆ ಎಂದು ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನಿಮ್ಮ ಮತವನ್ನು ನಮಗೆ ದೇಣಿಗೆ ನೀಡಿ ಎಂದು ಕೇಳಲು ಬಂದಿದ್ದೇವೆ. ನಿಮ್ಮ ದೇಣಿಗೆ ಇನ್ನೂ ಐದು ವರ್ಷ ರಾಜ್ಯಭಾರ ಮಾಡಲು ಅವಕಾಶ ನೀಡುತ್ತದೆ. ಹಿಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಿತು. ಯಡಿಯೂರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಸದಾನಂದ ಗೌಡರಿಗೆ ಮತದಾರರಿಗೆ ಮುಖ ತೋರಿಸಲೂ ಆಗುತ್ತಿಲ್ಲ.ಆದ್ದರಿಂದ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಯಾವು ಸಿದ್ಧಾಂತ ಉಳಿದಿಲ್ಲ. ಅಡ್ವಾಣಿ, ಜೋಷಿ, ಜಸ್ವಂತ್ ಸಿಂಗ್, ಸುಷ್ಮಾ ಸ್ವರಾಜ್ ಎಲ್ಲರನ್ನೂ ಮೂಲೆಗೆ ತಳ್ಳಿದರು ಎಂದು ಹೇಳಿದರು.ಗುಜರಾತ್ ಮಾದರಿ ಎಂದರೇನು ಎಂದು ಪ್ರಶ್ನಿಸಿದ ಅವರು ಶೇ. 55 ಬಾಲಕಿಯರು ಗುಜರಾತಿನಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅವರು ಸೌಂದರ್ಯ ಪ್ರಜ್ಞೆಯುಳ್ಳವರಾಗಿದ್ದಾರೆ ಎಂದು ಮೋದಿ ಬೇಜವಾಬ್ದಾರಿ ಉತ್ತರ ಕೊಡ್ತಾರೆ ಎಂದು ಇಬ್ರಾಹಿಂ ಹೇಳಿದರು.

ವೆಬ್ದುನಿಯಾವನ್ನು ಓದಿ